ಸುಬ್ರಮಣ್ಯ ಜನವರಿ 23 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಸುಳ್ಯ ತಾಲೂಕು, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಶ್ರೀ ಮಂಜುನಾಥೇಶ್ವರ ಬಜನಾ ಪರಿಷತ್ ಸುಳ್ಯ ತಾಲೂಕು, ಭಜನಾೋತ್ಸವ 2026 ಸಮಿತಿ ಸುಬ್ರಹ್ಮಣ್ಯ ವಲಯ, ಮತ್ತು ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳ ಹಾಗೂ ಭಜಕರ ಸಹಯೋಗದಲ್ಲಿ ಜನವರಿ 8ರಂದು ಆದಿತ್ಯವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ರಥಬೀದಿ ಸಭಾಂಗಣದಲ್ಲಿ ಫೆಬ್ರವರಿ 8 ಆದಿತ್ಯವಾರದಂದು ನಡೆಯುವ ತಾಲೂಕು ಭಜನೋತ್ಸವದ ಪೂರ್ವಭಾವಿ ಸಭೆಯು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾl ರವಿ ಕಕ್ಕೆ ಪದವು ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನ ತಾಲೂಕು ಭಜನಾ ಉತ್ಸವದ ಗೌರವಾಧ್ಯಕ್ಷ ಗಿರಿಧರ ಸ್ಕಂದ ವಹಿಸಿದ್ದರು. ಧರ್ಮಸ್ಥಳ ಗ್ರಾಮಾ ಅಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಭಜನೋತ್ಸವದ ರೂಪರೇಷೆಗಳನ್ನು ವಿವರವಾಗಿ ಸಭೆಗೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಬಜನೋತ್ಸವದ ಸುಬ್ರಹ್ಮಣ್ಯ ವಲಯದ ಪ್ರಮುಖರಾದ ವಿಮಲ ರಂಗಯ್ಯ ಗಿರೀಶ್ ಪೈಲಾಜ್, ಸತೀಶ ಟಿ ಎನ್,ಚಂದ್ರಶೇಖರ ಬಸವನ ಮೂಲ ಕುಲಕುಂದ, ಬಾಲಕೃಷ್ಣ ಕೊಪ್ಪಡ್ಕ ತೀರ್ಥರಾಮ ದೋಣಿಪಳ್ಳ ಗಂಗಾಧರ ಭಟ್ ಕಲ್ಮ ಕಾರು, ಗಿರೀಶ್ ಹೆರಕಜ,ಬಾಲಕೃಷ್ಣ ಕೊಪ್ಪಡ್ಕ, ರಾಜೇಶ್ವರಿ ಶಿವಾಲ,ಗಿರೀಶ್, ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕ ಬಾಲಕೃಷ್ಣ ಗೌಡ ಕೆ, ಬಾಲಕೃಷ್ಣ ಗೌಡ ಪುತ್ಯ, ವಿಶ್ವನಾಥ ರೈ ಅರ್ಗುಡಿ, ಸೋಮಶೇಖರ ಪೈಕ,ಸುಬ್ರಮಣ್ಯ ವಲಯದ ಎಲ್ಲಾ ಒಕ್ಕೂಟಗಳ ಅಧ್ಯಕ್ಷರು ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸ್ವಯಂಸೇವಕರು ಸೇವಾ ಪ್ರತಿನಿಧಿಗಳು ಹಾಜರಿದ್ದರು.
Post a Comment