ಕೌಕ್ರಾಡಿ ಗ್ರಾಮ ಪಂಚಾಯತ್ನಲ್ಲಿ ನೇತ್ರ ತಪಾಸಣಾ ಶಿಬಿರ.

 ಕೌಕ್ರಾಡಿ ಗ್ರಾಮ ಪಂಚಾಯತ್, ಎಸ್. ಎಸ್. ವಿ ಗೆಳೆಯರ ಬಳಗ ದೊಂತಿಲ, ಇವರ ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಸಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಜಿಲ್ಲಾ ನೇತ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂದತ್ವ ನಿವಾರಣಾ ವಿಭಾಗ ಮಂಗಳೂರು, ಡಾ. ಪಿ ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಮಾರ್ಚ್ 3ರಂದು ಕೌಕ್ರಾಡಿ ಗ್ರಾಮ ಪಂಚಾಯತ್ ಸಭಾ ಭವನ ದಲ್ಲಿ ನಡೆಯಿತು. ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಗೌಡ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಸಿ. ಆರ್. ಪಿ ಪ್ರಕಾಶ್,ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ್, ಮಹೇಶ್, ಪುಷ್ಪ, ದೇವಕಿ, ಎಸ್. ಎಸ್. ವಿ ಗೆಳೆಯರ ಬಳಗದ ಅಧ್ಯಕ್ಷರು ಸತೀಶ್, ಕಾರ್ಯದರ್ಶಿ ವಿಶ್ವನಾಥ್, ಹೊಸಮಜಲು ಶಾಲಾ ಮುಖ್ಯ ಗುರುಗಳು ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದ ಪಿ. ಜಿ. ವೈದ್ಯರಾದ ನವ್ಯ ಕಣ್ಣಿನ ಆರೈಕೆ ಮತ್ತು ಲಭ್ಯ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಿಕಾ ಸ್ವಾಗತಿಸಿ, ಸುಧೀರ್ ಕುಮಾರ್ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಸುಮಾರು 100 ಮಿಕ್ಕಿಗ್ರಾಮಸ್ಥರು ಕಣ್ಣಿನ ತಪಾಸನೆ ನಡೆಸಿದರು. ಪ್ರಸಾದ್ ನೇತ್ರಾಲಯದ ಪಿ. ಜಿ ವೈದ್ಯರು ಮತ್ತು ಕೌಕ್ರಾಡಿ ಗ್ರಾಮ ಪಂಚಾಯತ್ ಸಿಬ್ಬಂದಿ ಸಹಕರಿಸಿದರು

Post a Comment

أحدث أقدم