15-05-2025ರಂದು ಸಂಜೆ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬೈಪಾಸ್ ರಸ್ತೆಯಲ್ಲಿರುವ ಜೈನಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭರತ್ ಕುಂಮ್ಡೇಲು ಎಂಬ ವ್ಯಕ್ತಿ ಕೋಮುಧ್ವೇಶವನ್ನು ಉಂಟುಮಾಡುವಂತಹ ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪಕ್ಕೆ ಒಳಗಾಗಿದ್ದಾನೆ.
ಆರೋಪಿಯ ಮಾತುಗಳು ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟುಮಾಡುವ ಸಂಭವ ಇರುವ ಕಾರಣ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ 35/2025, ಕಲಂ-196, 353(2) BNS 2023 ರಂತೆ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ.
ಪೊಲೀಸರು ಆರೋಪಿಯ ಮಾತುಗಳು ಸ್ಥಳೀಯ ಸಮುದಾಯದಲ್ಲಿ ಆತಂಕ ಉಂಟುಮಾಡಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡಿದ್ದು, ಮುಂದಿನ ಪರಿಶೀಲನೆಗಳು ನಡೆಯುತ್ತಿವೆ.
ಸ್ಥಳೀಯ ನಾಗರಿಕರು ತಮ್ಮ ನೆಮ್ಮದಿಯನ್ನು ಕಾಪಾಡಲು ಸಹಕಾರ ನೀಡುವಂತೆ ಪೊಲೀಸ್ ಇಲಾಖೆ ವಿನಂತಿಸಿಕೊಂಡಿದೆ.
إرسال تعليق