ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಭಾವುಕ ಹಾಗೂ ಶಿಸ್ತುಪೂರ್ಣ ಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್ ಅವರ ಮಾರ್ಗದರ್ಶನ ಹಾಗೂ ಹಿರಿಯ ಸಹ ಶಿಕ್ಷಕ ಮತ್ತು ಯೋಗ ಗುರು ಕೃಷ್ಣ ಭಟ್ ಅವರ ನಿರ್ದೇಶನದಲ್ಲಿ ಸುಮಾರು 1100 ವಿದ್ಯಾರ್ಥಿಗಳು ಸಮೂಹ ಯೋಗಾಸನಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಸಹಯೋಗದಿಂದ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ನಾನಾ ಪ್ರಕಾರದ ಸುಮಾರು 20ಕ್ಕೂ ಹೆಚ್ಚು ಯೋಗಾಸನಗಳನ್ನು ನಿಷ್ಠೆಯಿಂದ ಕಾರ್ಯನಿರ್ವಹಿಸಿದರು. ಯೋಗಗುರು ಕೃಷ್ಣ ಭಟ್ ಅವರು ಯೋಗದ ಮಹತ್ವ, ಅದರ ದೈನಂದಿನ ಜೀವನದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಆರ್., ಮುಖ್ಯಶಿಕ್ಷಕಿ ನಂದಾ ಹರೀಶ್, ಮತ್ತು ಉಪನ್ಯಾಸಕಿ ಸೌಮ್ಯಾ ದಿನೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಯೋಗದ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು,“ಯೋಗ ಶರೀರದ ಆರೋಗ್ಯ ಮಾತ್ರವಲ್ಲ, ಮನಸ್ಸಿನ ಶುದ್ಧತೆ ಮತ್ತು ಶಾಂತಿಯಿಗೂ ದಾರಿ ನೀಡುವ ಶ್ರೇಷ್ಠ ಆಯಾಮವಾಗಿದೆ.” ಎಂದು ತಿಳಿಸಿದರು.
ಯೋಗದಂಥ ಶ್ರೇಷ್ಠ ಪರಂಪರೆಯು ಯುವ ಮನಸ್ಸುಗಳಲ್ಲಿ ಹಸಿ ಚೈತನ್ಯ ತುಂಬುವುದರಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.
إرسال تعليق