ಶ್ರೀ ಗಡಿಯಾಡಿ ಆದಿ ಮೊಗೇರ್ಕಳ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಕುಣಿತ ಭಜನಾ ತರಬೇತಿ ಸಮಾರೋಪ ಸಮಾರಂಭ – ಉಚಿತ ಪುಸ್ತಕ ವಿತರಣೆಯೂ ನಡೆಯಲಿದೆ.

ನೆಲ್ಯಾಡಿ: ಶ್ರೀ ಗಡಿಯಾಡಿ ಆದಿ ಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಪಟ್ಲಡ್ಕದ ದೈವಸ್ಥಾನದಲ್ಲಿ ಜೂನ್ 22, ಭಾನುವಾರ ನಡೆಯುವ ಕುಣಿತ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ವಿಜೃಂಭಣೆಯಿಂದ ಜರಗಲಿದೆ.

ಈ ಕಾರ್ಯಕ್ರಮವು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಡಬ ಹಾಗೂ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟ ಕಟ್ಟೆಮಜಲು ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ಮಕ್ಕಳ ಹಾಗೂ ಮಹಿಳೆಯರ ಭಾಗವಹಿತ್ತಿಯೊಂದಿಗೆ ವಿಶೇಷ ಕುಣಿತ ಭಜನಾ ಕಾರ್ಯಕ್ರಮವೂ ಆಯೋಜಿಸಲಾಗಿದೆ.
ಸಂಜೆ 5 ಗಂಟೆಗೆ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ದೈವಸ್ಥಾನದ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜಿ ಗೌರವಾದ್ಯಕ್ಷತೆ ವಹಿಸಲಿದ್ದು, ಹರೀಶ್ ಪಿ ಪಟ್ಲಡ್ಕ ಅವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸುಬ್ರಮಣ್ಯ ಶಬರಾಯ ದೀಪ ಪ್ರಜ್ವಲನೆ ಮಾಡಲಿದ್ದು, ಜಯಾನಂದ ಬಂಟ್ರಿಯಾಲ್ ಅವರು ಭಜನೆ ಉದ್ಘಾಟನೆ ನೆರವೇರಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಸತ್ಯನಾರಾಯಣ ಹೆಗ್ಗಡೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಗೌಡ, ಬಾಬು ನಾಯ್ಕ್, ಸುಂದರ ಗೌಡ ಒಗ್ಗು, ಬಾಲಕೃಷ್ಣ ಬಾಣಜಾಲ್, ಸುಬ್ರಮಣ್ಯ ಪ್ರಸಾದ್, ಕುಶಾಲಪ್ಪ ಗೌಡ, ಮಾರ್ಷಲ್ ಡಿ ಸೋಜ್ ಹಾಗೂ ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಗೀತಾ ನೇಲ್ಯಡ್ಕ ಭಾಗವಹಿಸಲಿದ್ದಾರೆ.

ಉಚಿತ ಪುಸ್ತಕ ವಿತರಣೆ: ಈ ಸಂದರ್ಭದಲ್ಲಿ ದೈವಸ್ಥಾನದ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಾಠ ಪುಸ್ತಕ ವಿತರಣೆ ಕಾರ್ಯಕ್ರಮವೂ ನಡೆಯಲಿದೆ. ಶೈಕ್ಷಣಿಕ ಪ್ರೋತ್ಸಾಹಕ್ಕೆ ಈ ಕಾರ್ಯಕ್ರಮ ಉತ್ತೇಜನವಾಗಲಿದೆ.

Post a Comment

أحدث أقدم