ಅಂತರಾಷ್ಟ್ರೀಯ ಯೋಗ ದಿನಾಚರಣೆಯ 11ನೇ ವರ್ಷದ ಅಂಗವಾಗಿ, ಜೂನ್ 21, 2025 ಶನಿವಾರದಂದು ಸುಬ್ರಹ್ಮಣ್ಯದಲ್ಲಿ ಗ್ರಾಮೀಣ ಸಮುದಾಯದಲ್ಲಿ ಯೋಗದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಮಹತ್ವಪೂರ್ಣ ವೇದಿಕೆಯಾಗಲಿದೆ.
ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಕಡಬ ತಾಲೂಕು ಪಂಚಾಯತ್ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಇವರುಗಳ ಆಶ್ರಯದಲ್ಲಿ ಮತ್ತು ಸಂಸ್ಕಾರ ಸಂಘಟನೆ ಸೇವೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ), ತುಮಕೂರು – ನೇತ್ರಾವತಿ ವಲಯ ಮಂಗಳೂರು, ಸುಬ್ರಹ್ಮಣ್ಯ-ಕಾಶಿಕಟ್ಟೆ ಶಾಖೆಯ ಸಹಕಾರದೊಂದಿಗೆ ಜರಗಿಸಲಾಗುತ್ತಿದೆ.
ಹಾಗೆಯೇ ಈ ಕಾರ್ಯಕ್ರಮಕ್ಕೆ ಓಂ ಶ್ರೀ ಸಂಜೀವಿನಿ ಒಕ್ಕೂಟ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಕುಕ್ಕೇ ಸುಬ್ರಹ್ಮಣ್ಯ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲೀಜನ್, ಡಾ. ರವಿ ಕಕ್ಕೆಪದವು ಸಮಾಜ ಸೇವೆ ಟ್ರಸ್ಟ್, ಗ್ರಾಮ ಮಟ್ಟದ ಇಲಾಖೆಗಳು ಹಾಗೂ ವಿವಿಧ ಸ್ಥಳೀಯ ಸಮಾಜಮುಖಿ ಸಂಘ-ಸಂಸ್ಥೆಗಳ ಜಂಟಿ ಸಹಭಾಗಿತ್ವವಿದೆ.
ಕಾರ್ಯಕ್ರಮವು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ಇರುವ ರಾಜೀವ್ ಗಾಂಧಿ ಸೇವಾ ಕೇಂದ್ರ ಸಭಾಭವನದಲ್ಲಿ, ಪ್ರಾತಃಕಾಲ 5.00 ರಿಂದ 7.00 ಗಂಟೆಯವರೆಗೆ ನಡೆಯಲಿದೆ.
"Yoga for One Earth, One Health – ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ" ಎಂಬ ಥೀಮ್‌ನಡಿ ನಡೆಯುವ ಈ ಯೋಗ ದಿನಾಚರಣೆಯಲ್ಲಿ ಗ್ರಾಮಸ್ಥರು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಮಾಜಸೇವಕರು ಸೇರಿದಂತೆ ಎಲ್ಲರ ಸಕ್ರಿಯ ಭಾಗವಹಿಸು ಬಹುದಾಗಿದೆ.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿವರ್ಗ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಮೂಲಕ ಎಲ್ಲರಿಗೂ ಆದರದ ಆಹ್ವಾನ ನೀಡಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುವಂತೆ ಕೋರಿದ್ದಾರೆ.
🌿 ಯೋಗದೊಂದಿಗೆ ಆರೋಗ್ಯಕರ ಜೀವನದತ್ತ ಹೆಜ್ಜೆ – ಎಲ್ಲರೂ ಪಾಲ್ಗೊಳ್ಳಿ, ಆರೋಗ್ಯವಂತರಾಗಿ 🌿
إرسال تعليق