ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನಿಂದ ಸೌಹಾರ್ದ ಸಮ್ಮಿಲನ.


 ಸುಬ್ರಹ್ಮಣ್ಯ ಜೂನ್ 19 : ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಗುರುವಾರ ಹಿಂದಿನ ಹಾಗೂ ಪ್ರಸಕ್ತ ಸಹಾಯಕ ಗವರ್ನರ್ ಗಳು ಮತ್ತು ಜೋನಲ್ ಲಿಫ್ಟಿನೆಂಟ್ಗಳ ಸಮ್ಮಿಲನ ಏನೆಕಲ್ಲು ರೈತ ಯುವಕಮಂಡಲದ ಸಭಾಭವನದಲ್ಲಿ ಜರಗಿತು.
 ಸಭಾಧ್ಯಕ್ಷತೆಯನ್ನು ಸುಬ್ರಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. ಹಿಂದಿನ ಸಹಾಯಕ ಗವರ್ನರ್ ವಿನಯಕುಮಾರ್ ಬೆಳ್ಳಾರೆ ಹಾಗೂ ಈ ಸಾಲಿನ ಸಹಾಯಕ ಗವರ್ನರ್ ಬಾಲಕೃಷ್ಣ ಪೈ, ಜೋನಲ್ ಲೆಫ್ಟಿನೆಂಟ್ ಗಳಾದ ವಿಶ್ವನಾಥ ನಡುತೋಟ, ವಿಜಯಕುಮಾರ ಅಮೈ ಕಾರ್ಯದರ್ಶಿಗಳಾದ ಚಿದಾನಂದ ಕುಳ, ಭವಾನಿ ಶಂಕರ ಪೈಲಾಜೆ, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್, ನಿಕಟ ಪೂರ್ವ ಅಧ್ಯಕ್ಷ ಪ್ರಶಾಂತ ಕೋಡಿ ಬೈಲು, ಉಪಸ್ಥಿತರಿದ್ದರು. 24 -25 ನೇ ಸಾಲಿನಲ್ಲಿ ನಡೆದ ಕಾರ್ಯಕ್ರಮಗಳ ಅವಲೋಕನ ಮಾಡಲಾಯಿತು, ಹಾಗೆಯೇ 25 -26ರ ಸಾಲಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.

Post a Comment

أحدث أقدم