ಬೆಂಗಳೂರು, ಜೂನ್ 19 – ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ನಿತ್ತ ನಿಷ್ಠೆಗೊಂಡಿರುವ ಶಾಸಕಿ ಭಾಗೀರಥಿ ಮುರುಳ್ಯ ಅವರು ಇಂದು ಸಮಾಜ ಕಲ್ಯಾಣ ಸಚಿವ ಡಾ. ಮಹಾದೇವಪ್ಪರನ್ನು ನೇರವಾಗಿ ಭೇಟಿ ಮಾಡಿ, ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರು ಸುಳ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕಾಮಗಾರಿ ಅರ್ಧದಲ್ಲಿಯೇ ನಿಂತಿರುವುದನ್ನು ಉಲ್ಲೇಖಿಸಿ, ಅದನ್ನು ಪೂರ್ಣಗೊಳಿಸಲು ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಜೊತೆಗೆ, ಸುಳ್ಯ ಕ್ಷೇತ್ರದ ವಿವಿಧ ಭಾಗಗಳ ರಸ್ತೆ ಅಭಿವೃದ್ಧಿಗೆ ಈ ಹಿಂದೆ ಸಲ್ಲಿಸಿದ್ದ ಮನವಿಗೆ ಸ್ಪಂದನೆ ನೀಡುವಂತೆ ಮತ್ತೆ ಮನವಿ ಮಾಡಿದರು.
ಶಾಸಕಿ ಯವರ ಮನವಿಗೆ ಸ್ಪಂದಿಸಿದ ಸಚಿವ ಡಾ. ಮಹಾದೇವಪ್ಪ ಅವರು, “ಅಗತ್ಯ ಪರಿಶೀಲನೆಗಳನ್ನು ಮುಕ್ತಾಯಗೊಳಿಸಿ, ಮುಂದಿನ ಎರಡು ತಿಂಗಳೊಳಗೆ ಅನುದಾನ ಬಿಡುಗಡೆ ಮಾಡುವೆನು” ಎಂದು ಭರವಸೆ ನೀಡಿದರು.
ಈ ಮಹತ್ವದ ಭೇಟಿಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪವತಿ ಬಾಳಿಲ ಅವರು ಸಹ ಉಪಸ್ಥಿತರಿದ್ದರು.
إرسال تعليق