ಮಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಟ್ರೇಡಿಂಗ್ ಸಂಸ್ಥೆಗಳ ಹೆಸರಿನಲ್ಲಿ ನಂಬಿಕೆ ಹುಟ್ಟಿಸಿ, ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿಸಿಕೊಂಡು ನಂತರ ಹಣ ವಾಪಸ್ ನೀಡದೇ ಓಡಿರುವ ಆನ್‌ಲೈನ್ ವಂಚನೆ ಪ್ರಕರಣವು ನಗರದಲ್ಲಿ ಬೆಳಕಿಗೆ ಬಂದಿದೆ.
ಮಾರ್ಚ್ 2024ರಲ್ಲಿ ಆರಂಭವಾದ ಈ ಘಟನೆಯಲ್ಲಿ, ಪೀಡಿತರು ಇನ್‌ಸ್ಟಾಗ್ರಾಂನಲ್ಲಿ ಟ್ರೇಡಿಂಗ್ ಜಾಹೀರಾತು ನೋಡಿದ ನಂತರ 'Fyers Market Discussion Group' ಎಂಬ ವಾಟ್ಸಾಪ್ ಗುಂಪಿಗೆ ಸೇರಲಾಗಿ Sharon Trivedi ಎಂಬ ಅಪರಿಚಿತ ವ್ಯಕ್ತಿಯಿಂದ ಸಂಪರ್ಕಕ್ಕಿದ್ದರು. ನಂತರ FYERSPLUS ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಸಿ, INSTITUTIONAL STOCK ಮತ್ತು IPO PLACEMENT ಗಳಲ್ಲಿ ಹೂಡಿಕೆಗೆ ಆಮಂತ್ರಿಸಲಾಗಿತ್ತು.
ಹೆಚ್ಚು ಲಾಭದ ಆಶೆಯಲ್ಲಿ ಪೀಡಿತರು ಸುಮಾರು 24,22,077 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ UPI, RTGS ಮತ್ತು IMPS ಮುಖಾಂತರ ವರ್ಗಾಯಿಸಿದ್ದಾರೆ. ಇತ್ತೀಚಿಗೆ ಈ ಅಪ್ಲಿಕೇಶನ್‌ನಲ್ಲಿ ಹಣ ಹಿಂದಕ್ಕೆ ಪಡೆಯಲು ಪ್ರಯತ್ನಿಸಿದಾಗ, TAX, ಕಮಿಷನ್ ಮತ್ತು ಸೆಕ್ಯುರಿಟಿ ಡೆಪಾಸಿಟ್ ಹೆಸರಿನಲ್ಲಿ ಮತ್ತಷ್ಟು ಹಣ ಪಾವತಿಸಲು ಒತ್ತಡ ಬರುವ ಮೂಲಕ ವಂಚನೆಯ ಅನುಮಾನ ಶುರುವಾಯಿತು.
ಇದೇ ರೀತಿಯಲ್ಲಿ ಇನ್ನೊಂದು ZERODHA ಹೆಸರಿನ ಟ್ರೇಡಿಂಗ್ ಕಂಪನಿಯ ಮೂಲಕವೂ Ishita Paul ಎಂಬುವವರು ಪೀಡಿತರೊಂದಿಗೆ ಸಂಪರ್ಕಕ್ಕೆ ಬಂದು, https://main.kiteimart.com ಎಂಬ ತಾಣದ ಮೂಲಕ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಇಲ್ಲಿ ಸಹ Customer Support ಮುಖಾಂತರ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.
2024ರ ಏಪ್ರಿಲ್ 21ರಿಂದ 2025ರ ಮೇ 31ರೊಳಗೆ ಈ ವಂಚನೆ ನಡೆದಿದೆ. ಹಣ ಹಿಂತಿರುಗಿಸುವ ನೆಪದಲ್ಲಿ TAX ಮತ್ತು ಇತರ ಶುಲ್ಕಗಳನ್ನು ಪಾವತಿಸಿದರೂ ಕೂಡ ಹೂಡಿಕೆ ಮಾಡಿದ ಮೊತ್ತ ಲಭಿಸದ ಕಾರಣ, ಪೀಡಿತರು ಈ ಬಗ್ಗೆ ಸಿಇಎನ್ ಕ್ರೈಂ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಇಂತಹ ಆಕರ್ಷಕ ಜಾಹೀರಾತುಗಳ ಬಲೆಗೆ ಬೀಳದೆ ಎಚ್ಚರಿಕೆಯಿಂದ ಇರುತ್ತಂತೆ ಪೊಲೀಸರು ಸಲಹೆ ನೀಡಿದ್ದಾರೆ.
إرسال تعليق