ಸುಳ್ಳು ಸುದ್ದಿ ಹರಡುವಲ್ಲಿ ಭಾಗಿಯಾದ ವ್ಯಕ್ತಿ ವಿರುದ್ಧ ಕೇಸ್: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಬಂಟ್ವಾಳ, ಜೂನ್ 21, 2025:
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 21.06.2025ರಂದು ಇಬ್ಬರು ಯುವಕರ ಮೇಲೆ ದಾಳಿ ಪ್ರಯತ್ನವಾಯಿತು ಎಂಬ ಸುಳ್ಳು ಸುದ್ದಿ ವಾಟ್ಸಾಪ್‌ ಮೂಲಕ ಹರಡಿದ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. “ಮುಸ್ಲಿಂ ಯುವ ಬಳಗ” ಎಂಬ ವಾಟ್ಸಾಪ್ ಗ್ರೂಪಿನಲ್ಲಿ Ziyad Ummi ಎಂಬ ಹೆಸರಿನ ವ್ಯಕ್ತಿಯು “ಸಜಿಪ ದೇರಾಜೆ ರಸ್ತೆಯ ಮಧ್ಯೆ ಯುವಕರಿಬ್ಬರ ಮೇಲೆ ದಾಳಿಗೆ ಯತ್ನ, ಘಟನಾ ಸ್ಥಳದಲ್ಲಿ ಸೇರಿದ ಜನರಿಂದ ಆಕ್ರೋಶ” ಎಂಬ ಉಲ್ಲೇಖದೊಂದಿಗೆ ಸಂದೇಶವನ್ನು ಹರಡಿದ್ದನು ಎಂದು ಹೇಳಲಾಗಿದೆ.

ಈ ವಿಷಯದ ಬಗ್ಗೆ ಸಾರ್ವಜನಿಕರಲ್ಲಿ ಭಯ ಮತ್ತು ಭ್ರಮೆ ಉಂಟಾಗಿರುವ ಹಿನ್ನೆಲೆಯಲ್ಲಿ, ವ್ಯಕ್ತಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 74/2025, ಕಲಂ: 240 BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.

ಇದೇ ಘಟನೆಯ ನಂತರ “ತಲವಾರು ದಾಳಿ” ಎಂಬ ಸುಳ್ಳು ಸುದ್ದಿಯನ್ನು ಸೋಶಿಯಲ್ ಮಿಡಿಯಾದಲ್ಲಿ ಹರಡಿದ ಹಾಗೂ ದೇರಾಜೆ ಬಸ್ ನಿಲ್ದಾಣದ ಬಳಿ 50-75 ಜನರನ್ನು ಸೇರಿಸಿ ರಸ್ತೆ ಸಂಚಾರಕ್ಕೆ ಅಡ್ಡಿಯಾದ ರೀತಿಯಲ್ಲಿ ಅಕ್ರಮವಾಗಿ ಕೂಟ ನಡೆಸಿದ ಆರೋಪದ ಮೇಲೆ ಮತ್ತೊಬ್ಬ ವ್ಯಕ್ತಿಯ ವಿರುದ್ಧ ಅ.ಕ್ರ: 77/2025 ಕಲಂ: 240, 285, 189(2), 191(2), 190 BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಮಾಜಿಕ ಜವಾಬ್ದಾರಿ ಮರೆತು ಸುಳ್ಳು ಸುದ್ದಿ ಹರಡುವುದು ಅಪರಾಧ – ಶಾಂತಿಗೆ ಹಾನಿ ಮಾಡುವ ಹಾದಿ ಎಂದಿಗೂ ಒಳ್ಳೆಯದಾಗದು❞

ಒಂದು ಸುಳ್ಳು ಸಂದೇಶ ಹಲವು ಜನರ ಭಾವನೆಗಳಿಗೆ, ಸಮುದಾಯಗಳ ನಡುವೆ ನಂಬಿಕೆಗೆ,ಸಮಾಜದ ಶಾಂತಿಗೆ ದೊಡ್ಡ ಅಪಾಯ ಉಂಟುಮಾಡಬಹುದು. ವಾಟ್ಸಾಪ್‌ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ "ತಕ್ಷಣದ ಸುದ್ದಿಯ" ಹೆಸರಲ್ಲಿ ಪರಿಶೀಲನೆ ಇಲ್ಲದ ಮಾಹಿತಿ ಹಂಚುವವರು, ತಮ್ಮ ಕೈಗಳಿಂದಲೇ ಕಾನೂನು ಬಲದೊಳಗೆ ಬೀಳುವಂಥ ದುಷ್ಕೃತ್ಯಕ್ಕೆ ನಾಂದಿ ಹಾಡುತ್ತಾರೆ.

ಭಯ ಹುಟ್ಟುಹಾಕುವ ನಿಟ್ಟಿನಲ್ಲಿ ಪೋಸ್ಟ್ ಮಾಡಿದ ಪ್ರತಿಯೊಂದು ಸಂದೇಶ, ದೇಶದ ಭದ್ರತೆಗೂ ಮತ್ತು ನಿನ್ನ ಭವಿಷ್ಯಕ್ಕೂ ಅಪಾಯ.

ನಿಜವಾದ ಬುದ್ಧಿವಂತಿಕೆ ಎಂದರೆ ಸಮಾಧಾನ ಸೃಷ್ಟಿಸುವುದು, ಸಮಾಜದಲ್ಲಿ ಶಾಂತಿ ಕಾಪಾಡುವುದು. ಸುಳ್ಳು ಸುದ್ದಿಯಿಂದ ಕ್ಷಣಿಕ ತೃಪ್ತಿ ಸಿಗಬಹುದು ಆದರೆ ಅದು ನಿನ್ನ ಮೇಲೆ ಸದಾಕಾಲದ ಮುದ್ರೆಯಾಗಿ ಮುದ್ರಿತವಾಗುತ್ತದೆ.

ಸೂಚನೆ:
ಈ ಯುಗದಲ್ಲಿ "ಫಾರ್ವರ್ಡ್" ಮಾಡುವ ಮೊದಲು "ಸತ್ಯ" ಪರೀಕ್ಷಿಸುವುದು ಕೇವಲ ಜವಾಬ್ದಾರಿ ಅಲ್ಲ, ಅದು ನಿನ್ನ "ಪ್ರಜ್ಞಾವಂತತೆ"ಯ ಪ್ರತಿಬಿಂಬ.





Post a Comment

أحدث أقدم