ಬೆಥನಿ ಸಂಯುಕ್ತ ಪಿ.ಯು ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ವಿಶೇಷ ರೀತಿಯಲ್ಲಿ ನೆರವೇರಿತು.


ನೂಜಿಬಾಳ್ತಿಲ
, ಜೂನ್ 21, 2025 – ವಿಶ್ವ ಯೋಗ ದಿನಾಚರಣೆಯನ್ನು ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಂತಿಯುತ ಜೀವನ ಶೈಲಿಗೆ ಯೋಗದ ಪಾತ್ರ ಅತ್ಯಂತ ಮಹತ್ವದ್ದೆಂಬ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಪ್ರಮುಖ ಅತಿಥಿಯಾಗಿ ಆಗಮಿಸಿದ ರೆವ. ಫಾ. ಲೂಕೋಸ್ ತನಿಯಿಲ್ ಅವರು “ಯೋಗ ಮಾಡಿದವರಿಗೆ ರೋಗವಿಲ್ಲ” ಎಂಬ ಸಂದೇಶ ನೀಡಿ, ಪ್ರತಿದಿನ ಯೋಗ ಅಭ್ಯಾಸದಿಂದ ಪ್ರತಿ ವ್ಯಕ್ತಿಯು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು. 177ಕ್ಕೂ ಹೆಚ್ಚು ರಾಷ್ಟ್ರಗಳು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿವೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡರು.
ಇನ್ನು, ಗಣಿತ ಶಿಕ್ಷಕಿ ಶ್ರೀಮತಿ ಅನನ್ಯ ಅವರು ಯೋಗದ ಮಹತ್ವವನ್ನು ವಿವರಿಸುತ್ತಾ ವಿದ್ಯಾರ್ಥಿಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸಿದರು. ಕನ್ನಡ ಶಿಕ್ಷಕಿ ಶ್ರೀಮತಿ ಜಿನಿ ಅವರು ಯೋಗಾಭ್ಯಾಸದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪುನೀತ್ ಮತ್ತು ಶ್ರೀ ಮತ್ತಾಯಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ರೆವ. ಫಾ. ಆಂಟನಿ ಪಡಿಪುರಕ್ಕಲ್ Ol C ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ ಯೋಗದ ಆದ್ಯತೆ ಬಗ್ಗೆ ವಿವರಿಸಿದರು. ಪ್ರಾಂಶುಪಾಲರಾದ ಜಾರ್ಜ್ ಟಿ ಎಸ್ ಸ್ವಾಗತ ಭಾಷಣ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಗುರುಗಳಾದ ಶ್ರೀ ತೋಮಸ್ ವಂದನೆ ಸಲ್ಲಿಸಿದರು. ವಿದ್ಯಾರ್ಥಿನಿ ದೀಪ್ತಿ ಕಾರ್ಯಕ್ರಮವನ್ನು ಸೊಗಸಾಗಿ ನಿರೂಪಿಸಿದರು.

ಸಂಸ್ಥೆಯು ಏರ್ಪಡಿಸಿದ್ದ ಈ ಯೋಗ ಕಾರ್ಯಕ್ರಮದಲ್ಲಿ ಸುಮಾರು 220 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡು ಶಾರೀರಿಕ ಹಾಗೂ ಮಾನಸಿಕ ಸುಸ್ಥಿತಿಗಾಗಿ ಯೋಗದ ಮಹತ್ವವನ್ನು ಮತ್ತೊಮ್ಮೆ ನೆನಪಿಸಿಕೊಂಡರು.

Post a Comment

أحدث أقدم