ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ನೇರಂಕಿ ಗ್ರಾಮದ ನೇರಂಕಿ ಎಂಬಲ್ಲಿ ಅಕ್ರಮ ಕೋಳಿ ಅಂಕ ಜೂಜಾಟ ನಡೆಯುತ್ತಿದ್ದ ಮಾಹಿತಿ ಪಡೆದ ಪೋಲಿಸ್‌ರು ಸ್ಥಳಕ್ಕೆ ಧಾಳಿ ನಡೆಸಿ ಮೂರ್ನೆಯವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಡಬ ಪೊಲೀಸ್ ಠಾಣೆಯ ಉಪನಿರೀಕ್ಷಕ ಅಭಿನಂದನ್ ಅವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಗಳ ತಂಡವು ಜೂನ್ 10ರಂದು ಈ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಧಾಳಿ ನಡೆಸಿತು. ಈ ವೇಳೆ ಜೂಜಾಟದಲ್ಲಿ ತೊಡಗಿದ್ದ ಎಂಟು ಜನ ಆರೋಪಿಗಳ ಪೈಕಿ ಮೂವರು ಪೋಲಿಸ್ ವಶಕ್ಕೆ ಲಗ್ನವಾಗಿದ್ದು, ಇತರರು ಪರಾರಿಯಾಗಿದ್ದಾರೆ.
ವಶಕ್ಕೆ ಪಡೆಯಲಾದವರ ವಿವರ:
ರಾಧಾಕೃಷ್ಣ (52),ಅಲಂಕಾರ,ಕಡಬ.
ಮೋಹನ್‌ದಾಸ್ (48),ಪೆರಾಬೆ ಗ್ರಾ.ಪಂ.ಸದಸ್ಯ.ಅಲಂಕಾರ,ಕಡಬ.
ವೆಂಕಟರಮಣ (30),ಅಲಂಕಾರ,ಕಡಬ
ಸ್ಥಳದಿಂದ 6 ಬೈಕುಗಳು, 2 ಕಾರುಗಳು, 4 ಕೋಳಿಗಳು, ಕೋಳಿ ಅಂಕದಲ್ಲಿ ಬಳಸಲಾಗುತ್ತಿದ್ದ ಕತ್ತಿಯು ಹಾಗೂ ನಗದು ರೂ.3,560ವನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 44/2025 ನೇಡಿ, ಕರ್ನಾಟಕ ಪೊಲೀಸ್ ಕಾಯಿದೆ 1963ರ ಕಲಂ 87 ಹಾಗೂ 93 ಮತ್ತು ಪಶು ಕ್ರೂರತೆ ತಡೆ ಕಾಯಿದೆ 1960ರ ಕಲಂ 3 ಮತ್ತು 11ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಯುತ್ತಿದೆ.
ಕೋಳಿ ಅಂಕದಂತಹ ಅಕ್ರಮ ಚಟುವಟಿಕೆಗೆ ಕಡಬ ಪೊಲೀಸ್ ಠಾಣೆಯ ದಿಟ್ಟ ಹೆಜ್ಜೆ ಸಾರ್ವಜನಿಕ ಪ್ರಶಂಸೆಗೂ ಪಾತ್ರವಾಗಿದೆ.
إرسال تعليق