ಸುಬ್ರಹ್ಮಣ್ಯ:ಸುಬ್ರಹ್ಮಣ್ಯ ಗ್ರಾಮದ ಕಾಶಿಕಟ್ಟೆ ಮಾರ್ಗದಲ್ಲಿ ಆದಿ ಸುಬ್ರಹ್ಮಣ್ಯ ಕಡೆಗೆ ಹೋಗುವ ರಸ್ತೆಯಲ್ಲಿ ಚಲಿಸುತ್ತಿದ್ದ ಯುವಕನೊಬ್ಬನಿಗೆ ಇನ್ನೊಬ್ಬ ಯುವಕ ಅವಾಚ್ಯ ನಿಂದನೆ ಮಾಡಿ, ಕೈಯಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಘಟನೆ ಲಾಡ್ಜ್‌ವೊಂದರ ಮುಂಭಾಗದ ಸಿಸಿಟಿವಿ ಅಥವಾ ಮೊಬೈಲ್ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದರ ವಿಡಿಯೋವು ವಾಟ್ಸಾಪ್ ಮೂಲಕ ಹರಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ.
ಯುವಕನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ನಂತರ ಶಾರೀರಿಕ ಹಲ್ಲೆ ನಡೆಸಿದ ವ್ಯಕ್ತಿಯನ್ನು ಶಂಕರ್ ಎಂಬಾತನೆಂದು ಗುರುತಿಸಲಾಗಿದೆ. ಈ ಸಂಬಂಧ ದಿನಾಂಕ 10.06.2025 ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಾಧ ಸಂಖ್ಯೆ:31/2025.ಕಲಂ:126(2),115(2),352 BNS ರಂತೆ ಪ್ರಕರಣ ದಾಖಲಾಗಿದೆ,ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
إرسال تعليق