ಸುಬ್ರಮಣ್ಯ ಜೂನ್ 17: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ಡಾl ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ರೋಟರಿ ಕ್ಲಬ್ ಸುಬ್ರಹ್ಮಣ್ಯ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಜಂಟಿ ಆಶ್ರಯದಲ್ಲಿ ಕುಮಾರಧಾರ ದೋಣಿಮಕ್ಕಿ ಪರಿಸರದ ಖಾಲಿ ಪ್ರದೇಶದಲ್ಲಿ ಸುಮಾರು 150 ಹಣ್ಣು ಹಾಗೂ ಫಲವತ್ತತೆಯ ಗಿಡಗಳನ್ನು ಗುರುವಾರ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ನಾವು ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನ ವಹಿಸುವುದರೊಂದಿಗೆ ಎಲ್ಲಿ ಅರಣ್ಯದ ಅಂಚಿನಲ್ಲಿ ಬರಡುಭೂಮಿ ಖಾಲಿ ಪ್ರದೇಶ ಅಲ್ಲಿ ಹಣ್ಣುಗಳನ್ನು ಹಾಗೂ ಫಲವತ್ತತೆಯ ಗಿಡಗಳನ್ನು ನೆಟ್ಟಲ್ಲಿ ಅದು ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರವಾಗಿ ಉಪಯೋಗವಾಗುತ್ತದೆ. ಹಾಗೆ ಆದಾಗ ಕಾಡುಪ್ರಾಣಿಗಳು ನಾಡಿಗೆ ಬರುವುದು ಕಡಿಮೆಯಾಗುತ್ತದೆ, ಹಾಗೂ ಕೃಷಿಕರ ತೋಟ, ಕೃಷಿ ಭೂಮಿಯನ್ನು ನಾಶ ಮಾಡುವುದನ್ನು ತಡೆಯಬಹುದು. ಎಲ್ಲರೂ ಪರಿಸರನ್ನ ಉಳಿಸೋಣ, ಬೆಳೆಸೋಣ ಮತ್ತು ಶುದ್ಧವಾದ ಗಾಳಿ ನೀರನ್ನು ಪಡೆಯೋಣ ಎಂದು ಹೇಳಿದರು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರ ಅಧ್ಯಕ್ಷ ಎಂಆರ್ ಪೂರ್ವ ರಾಷ್ಟ್ರ ಅಧ್ಯಕ್ಷ ಡಾl ಕೇದಿಗೆ ಅರವಿಂದ ರಾವ್, ರಾಷ್ಟ್ರೀಯ ಉಪಾಧ್ಯಕ್ಷ ಸಿದ್ದಗಂಗಯ್ಯ,ಸಂಯೋಜಕ ಕಿಶೋರ್ ಕರ್ನಾಂಡಿಸ್, ಮಂಗಳೂರಿನ ವಿಕಾಸ ಶೆಟ್ಟಿ, ಸುಬ್ರಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನೂತನ ಅಧ್ಯಕ್ಷ ವೆಂಕಟೇಶ್ ಎಚ್ ಎಲ್ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಬರಡುಭೂಮಿ ವೃಕ್ಷಾರೋಪನದ ರೂವಾರಿ ಡಾl ರವಿಕಕ್ಕೆ ಪದವು ಸುಬ್ರಹ್ಮಣ್ಯ ಕುಕ್ಕೆ ಶ್ರೀಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ನಡು ತೋಟ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ದನೇಶ್, ಮುಖ್ಯ ಪೇದೆ ಪ್ರಮೀಳ, ಪಂಜ ವಲಯ ಉಪ ಅರಣ್ಯಾಧಿಕಾರಿ ಮಹಮ್ಮದ್ ಮೆಹಬೂಬ, ಗಸ್ತು ವನಪಾಲಕ ಧರಣಪ್ಪ,ವೀಕ್ಷಕ ಗಣೇಶ ಹೆಗಡೆ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಪ್ರಭಾಕರ ಪಟ್ರೆ, ಅಶೋಕ್ ಮೂಲೆ ಮಜಲು, ಮೋಹನ್ ದಾಸ ರೈ, ಲೋಕೇಶ್ ಬಿ ಎನ್, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಸ್ವಯಂಸೇವಕರು ಕುಕ್ಕೆ ಶ್ರೀ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸಿತರಿದ್ದರು. ತದನಂತರ ನಡೆದ ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಸದಸ್ಯರಾದ ಅಶೋಕ ನೆಕ್ರಾಜೇ, ರಾಜ್ಯ ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾರವರನ್ನ, ಪೊಲೀಸ್ ಸಹಾಯಕ ಉಪನಿರೀಕ್ಷಕ ಧನೀಶ್, ಪಂಜ ಗಸ್ತು ಮನ ಪಾಲಕ ದರಣಪ್ಪ ಅವರುಗಳನ್ನ ಸನ್ಮಾನಿಸಲಾಯಿತು. ಸುಬ್ರಹ್ಮಣ್ಯ ಕುಕ್ಕೆ ಸೀನಿಯರ್ ಚೇಂಬರ್ ನ ನೂತನ ಕಾರ್ಯದರ್ಶಿ ಗೋಪಾಲ್ ಎಣ್ಣೆ ಮಜಲ್ ಸ್ವಾಗತಿಸಿ ವಂದಿಸಿದರು
إرسال تعليق