ಸುಬ್ರಹ್ಮಣ್ಯ ಜೂನ್ 22 : ಸುಬ್ರಹ್ಮಣ್ಯ ರೋಟರಿ ಕ್ಲಬ್ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳಾದ ಸಾರ್ವಜನಿಕ ಸಮುದಾಯ ಅಭಿವೃದ್ಧಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮಗಳು ಅಂತರರಾಷ್ಟ್ರೀಯ ರೋಟರಿ ಸಂಸ್ಥೆಗೆ ನೀಡಿದ ದೇಣಿಗೆ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳಿಗೆ ಈ ಬಾರಿ ರೋಟರಿ ಜಿಲ್ಲೆ 31 81ರ ಸಣ್ಣ ಕ್ಲಬ್ಗಳಲ್ಲಿ ಡೈಮಂಡ್ ಪ್ಲಸ್ ಅವಾರ್ಡ್ ಪ್ರಶಸ್ತಿ ಲಭಿಸಿರುತ್ತದೆ.
ನಿನ್ನೆ ಶನಿವಾರ ಮಂಗಳೂರು ಪಿಲಿಕುಳ ಸ್ಕೌಟ್ ಹಾಗೂ ಗೈಡ್ಸ್ ಸಭಾಭವನದಲ್ಲಿ ನಡೆದ ಜಿಲ್ಲಾ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಕ್ರಮ ದತ್ತ ಅವರು ಪ್ರಶಸ್ತಿ ವಿತರಿಸಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ಡೈಮಂಡ್ ಪ್ಲಸ್ ಅವಾರ್ಡ್ ನೊಂದಿಗೆ ಸಿಗ್ನಿಫಿಕೆಂಟ್ ಅವಾರ್ಡ್ ಹಾಗೂ ಎಂಗೇಜ್ಮೆಂಟ್ ಅವಾರ್ಡ್ ಕೂಡ ಲಭಿಸಿರುತ್ತದೆ.ಈ ಸಂದರ್ಭದಲ್ಲಿಜಿಲ್ಲಾ ಅವಾರ್ಡ್ ಕಮಿಟಿ ಪೂರ್ವ ಗವರ್ನರ್ ದೇವದಾಸ್ ರೈ,ನಿಯೋಜಿತ ಜಿಲ್ಲಾ ಗವರ್ನರ್ ರಾಮಕೃಷ್ಣ,ಜಿಲ್ಲಾ ಕಾರ್ಯದರ್ಶಿಗಳಾದ ರಿತೇಶ್ ಬಾಳಿಗ, ಆಸ್ಕರ್ ಆನಂದ್, ವಲಯ 5ರ ಅಸಿಸ್ಟೆಂಟ್ ಗವರ್ನರ್ ವಿನಯ ಕುಮಾರ್ ಬೆಳ್ಳಾರೆ ಮುಂತಾದವರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್ ಹಾಗೂ ಕಾರ್ಯದರ್ಶಿ ಚಿದಾನಂದ ಕುಳ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೋಟರಿ ಜೋನ ಲ್ ಲೆಫ್ಟಿನೆಂಟ್ ವಿಶ್ವನಾಥ ನಡು ತೋಟ, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ, ಪೂರ್ವ ಅಸಿಸ್ಟೆಂಟ್ ಗವರ್ನರ್ಗಳಾದ ಶಿವರಾಮ ಎನೇಕಲ್, ರಾಮಕೃಷ್ಣ ಮಲ್ಲಾರ,ರೋಟರಿ ಕ್ಲಬ್ಬಿನ ಪೂರ್ವಧ್ಯಕ್ಷರುಗಳಾದ ಗಿರಿಧರ ಸ್ಕಂದ, ಲೋಕೇಶ್ ಬಿ ಎನ್, ವೆಂಕಟೇಶ್ ಎಚ್ ಎಲ್, ಗೋಪಾಲ ಎಣ್ಣೆ ಮಜಲ್, ಸೀತಾರಾಮ್ ಎಣ್ಣೆ ಮಜಲ್, ಮಾಯಿಲಪ್ಪ ಸಂಕೇಶ, ಭರತ್ ನಿಕ್ರಾಜೆ,ವಿಜಯಕುಮಾರ ಅಮೈ, ಪ್ರಶಾಂತ್ ಕೋಡಿಬೈಲು, ಡಾl ರವಿ ಕಕ್ಕೆ ಪದವು, ಸದಸ್ಯರುಗಳಾದ ರೋಹಿತ್ ಬಿಬಿ, ವಿಶ್ರುತ್ ಕುಮಾರ್, ನಾಗರಾಜ ಪರಮಲೆ ಪುನೀತ್ ಕರ್ನಾಜೆ , ಶಿವಪ್ರಸಾದ್ ಮಾದನ ಮನೆ ನವೀನ್ ವಾಲ್ತಾಜೆ ಮುಂತಾದವರು ಹಾಜರಿದ್ದರು.
إرسال تعليق