ವೇಣೂರು: ಬೆಳ್ತಂಗಡಿ ತಾಲೂಕು ಗುಂಡೇರಿ ಗ್ರಾಮದ ದಿನಸಿ ಅಂಗಡಿಯಲ್ಲಿ ಪರವಾನಿಗೆ ಇಲ್ಲದೇ ಅಕ್ರಮ ಮದ್ಯವನ್ನು ದಾಸ್ತಾನು ಇಟ್ಟು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಪ್ರಕರಣವನ್ನು ವೇಣೂರು ಪೊಲೀಸ್ ಠಾಣೆ ಭೇದಿಸಿದ ಘಟನೆ ಜೂನ್ 21ರಂದು ಬೆಳಕಿಗೆ ಬಂದಿದೆ.
ಪೊಲೀಸ್ ಉಪನಿರೀಕ್ಷಕರು (ತನಿಖೆ) ಆನಂದ ಎಮ್ ನೇತೃತ್ವದ ತಂಡ ಬಜಿರೆ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಗುಂಡೇರಿ ಎಂಬಲ್ಲಿ ಇರುವ ಅಂಗಡಿಯಲ್ಲಿ ಮದ್ಯ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಯಿತು. ಸಿಬ್ಬಂದಿಗಳ ಸಹಾಯದಿಂದ ಅಂಗಡಿಯಲ್ಲಿ ಶೋಧನೆ ನಡೆಸಿದಾಗ, ಅಂಗಡಿಯ ಹೊರಗಿನಿಂದ ಇರಿಸಿದ್ದ ಉಪ್ಪಿನ ಗೋಣಿಗಳ ಪಕ್ಕದಲ್ಲಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲವೊಂದರಲ್ಲಿ ಮದ್ಯದ ಸ್ಯಾಚೆಟ್ಗಳು ಪತ್ತೆಯಾದವು.
ಪಂಚರ ಸಮಕ್ಷಮದ ಪರಿಶೀಲನೆಯ ವೇಳೆ Mysore Lancer Whisky ಎಂಬ ಮದ್ಯದ 90ML ಸಾಮರ್ಥ್ಯದ ಒಟ್ಟು 44 ಸ್ಯಾಚೆಟ್ಗಳು (3.960 ಲೀಟರ್) ಪತ್ತೆಯಾದವು. ಜಪ್ತಿ ಮಾಡಿದ ಮದ್ಯದ ಮೌಲ್ಯವನ್ನು ಸುಮಾರು ರೂ. 1760 ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 53/2025, ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಈ ರೀತಿಯ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ.
إرسال تعليق