ಮಂಗಳೂರು, ಜೂನ್ 11, 2025:
ಮಾಜಿ ಶಾಸಕರಾದ ಮೊಯಿದ್ದೀನ್ ಬಾವಾ ಅವರ ಮೇಲೆ ಹಾಗೂ ಅವರ ಇಬ್ಬರು ಸಹಚರರ ಮೇಲೆ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದ್ದು,
ದಿನಾಂಕ 09-06-2025 ರಂದು ರಾತ್ರಿ ಸುಮಾರು 8 ಗಂಟೆಯ ವೇಳೆ ಮೊಯಿದ್ದೀನ್ ಬಾವಾ ಅವರು ಎನ್.ಎಂ.ಪಿ.ಎ (ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ) ಕಛೇರಿಯ ಡೆಪ್ಯೂಟಿ ಚೇರ್ಪರ್ಸನ್ ಅವರ ಕಛೇರಿಗೆ ಅನುಮತಿಸದೆ ನುಗ್ಗಿದ್ದು, ಸುಮಾರು 15 ನಿಮಿಷಗಳ ಕಾಲ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪ ಎದುರಾಗಿದೆ. ಈ ವೇಳೆ ಅವರು ಡೆಪ್ಯೂಟಿ ಚೇರ್ಪರ್ಸನ್ ಅವರನ್ನು ಕಛೇರಿಯಿಂದ ಹೊರಗೆ ಹೋಗಲು ಅವಕಾಶ ನೀಡದೆ ತಡೆಯುತ್ತಿದ್ದಾರೆ ಎಂಬುದೂ ದೂರಿನಲ್ಲಿ ಉಲ್ಲೇಖವಾಗಿದೆ.
ಘಟನೆ ಬಳಿಕವೂ ಅವರನ್ನು ಹಿಂಬಾಲಿಸುತ್ತಾ ಬೆದರಿಕೆ ಹಾಕಿ, ಅಸಭ್ಯವಾಗಿ ವರ್ತಿಸಿದ್ದು, ಅವರು ಕಾರಿನಲ್ಲಿ ಬೇರೆ ಕರ್ತವ್ಯಕ್ಕಾಗಿ ಹೊರಟಾಗ ಅವರ ವಾಹನವನ್ನೂ ತಡೆದು ವಾದ-ವಿವಾದ ನಡೆಸಿದ ಬಗ್ಗೆ Secretary, NMPA, Panambur ಅವರು ದಿನಾಂಕ 10-06-2025 ರಂದು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 60/2025 ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂಗಳು 224, 221, 132, 126, 127, 226 BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
إرسال تعليق