ಮಂಗಳೂರು: ಇತ್ತೀಚೆಗೆ ವಾಟ್ಸಪ್ ಸಮೂಹಗಳಲ್ಲಿ ಹರಿದಾಡಿದ ತಲ್ವಾರ್ ಹಿಡಿದ ಬೈಕ್ ಸವಾರರ ಫೋಟೋ ಮತ್ತು ವಾಯ್ಸ್ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಈ ಕುರಿತು ಮಂಗಳೂರು ಸಿಟಿ ಪೊಲೀಸ್ ಸ್ಪಷ್ಟನೆ ನೀಡಿದ್ದು.
ಘಟನೆಯ ಹಿಂದಿನ ನಿಜಾಂಶವನ್ನೂ ಪೊಲೀಸರು ಬಹಿರಂಗಪಡಿಸಿದ್ದಾರೆ. ಎರಡು ಯುವಕರು ಬೈಕ್‌ನಲ್ಲಿ ಮೂಡಬಿದ್ರೆಯ ಕಡೆಗೆ ಸಾಗುತ್ತಿದ್ದರು. ಅವರಲ್ಲಿ ಹಿಂಬದಿಯ ಸವಾರನು ತನ್ನ ಕೈಯಲ್ಲಿ ತಲ್ವಾರ್ ಅಲ್ಲ, ಬದಲಾಗಿ ಒಂದು ಆಕ್ವೇರಿಯಂ ಕಲ್ಲು ಮತ್ತು ಇ-ಸಿಗರೇಟ್ ಹಿಡಿದಿದ್ದನು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತಪ್ಪು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹಂಚಿದವರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂತಹ ಭಯಭೀತಿ ಉಂಟುಮಾಡುವ, ನಿಖರದಾಧಾರವಿಲ್ಲದ ಮಾಹಿತಿ ಹರಡುವುದು ಕಾನೂನುಬಾಹಿರವಾಗಿದೆ. ಸಾರ್ವಜನಿಕರು ವಾಟ್ಸಪ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸಂದೇಶ ಹರಡುವ ಮೊದಲು ಅದರ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಮಂಗಳೂರು ಸಿಟಿ ಪೊಲೀಸರು ನೀಡಿದ್ದಾರೆ.
إرسال تعليق