ಸುಳ್ಯ ಪೇಟೆ ಗಾಂಧಿನಗರದ ವಿವೇಕಾನಂದ ಸರ್ಕಲ್ ಬಳಿ ಸಾಮಾಜಿಕ ಸಾಮರಸ್ಯ ಹದಗೆಡುವ ರೀತಿಯಲ್ಲಿ ಗುಂಪು ಸೇರಿ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದ ಐದು ಯುವಕರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಿನಾಂಕ 10.06.2025 ರಂದು ಸಂಜೆ 6 ಗಂಟೆ ಸುಮಾರಿಗೆ ಸುಳ್ಯ ಪೊಲೀಸ್ ಠಾಣೆಯ ಪಿಎಸ್‌ಐ ಸರಸ್ವತಿ ಬಿ ಟಿ ರವರ ನೇತೃತ್ವದಲ್ಲಿ ಅನುಕುಮಾರ್,ಸತೀಶ್ ಮತ್ತು ಪ್ರಕಾಶ್ ರವರು ಇಲಾಖಾ ಜೀಪಿನಲ್ಲಿ ಗಾಂಧಿನಗರ, ಶ್ರೀರಾಮಪೇಟೆ, ವಿವೇಕಾನಂದ ಸರ್ಕಲ್ ಮಾರ್ಗವಾಗಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ಸಂದರ್ಭದಲ್ಲಿ ಸುಳ್ಯ ಕಸಬಾ ಗ್ರಾಮದ ಕೆವಿಜಿ ಜಂಕ್ಷನ್ ಬಳಿ ಐದು ಮಂದಿ ಯುವಕರು ಗುಂಪಾಗಿ ನಿಂತು ಸಾರ್ವಜನಿಕ ಸ್ಥಳದಲ್ಲಿ ಕೇಡನ್ನು ಉಂಟುಮಾಡುವ ರೀತಿಯಲ್ಲಿ ಮಾತನಾಡುತ್ತಿದ್ದು, ಕೈಯಲ್ಲಿ ಹಲ್ಲೆಗೆ ತೊಡಗಿರುವುದು ಪೊಲೀಸರ ಗಮನಕ್ಕೆ ಬಂತು. ತಕ್ಷಣ ಸ್ಥಳದಲ್ಲಿ ಹಾಜರಾಗಿ ಪೊಲೀಸರು ವಿಚಾರಣೆ ನಡೆಸಿದಾಗ ವಶಕ್ಕೆ ಪಡೆದವರ ಹೆಸರುಗಳು ಈ ಕೆಳಗಿನಂತಿವೆ:
1. ಮಹಮ್ಮದ್ ರಾಶಿಕ್ (19)
2. ಮಹಮ್ಮದ್ ಸುನೈಪ್ (23)
3. ಅಂಕಿತ್ (22)
4. ಕೀರ್ತನ್ (21)
5. ಆದಿತ್ಯನ್ (20)
ಸಾರ್ವಜನಿಕರಿಗೆ ಭಯ ಉಂಟುಮಾಡುವ ರೀತಿಯಲ್ಲಿ ನಡೆದುಕೊಂಡ ಹಾಗೂ ಯಾವುದೇ ಅಪರಾಧವೆಡೆಗೆ ಸಾಜ್ಜಾಗಿದ್ದರು ಎನ್ನುವ ಆರೋಪದಡಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 65/2025, ಕಲಂಗಳು: 189(2), 191, 115(2), 352, 351(2) R/W 190 (BNS 2023) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
إرسال تعليق