ಈ ಸಮ್ಮೇಳನದಲ್ಲಿ ಘಟಕಾಧ್ಯಕ್ಷ ಜೇಸಿ ನಟೇಶ್ ಪೂಜಾರಿ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುವ ಉದ್ದೇಶದಿಂದ ಜೇಸಿಐ ಭಾರತಕ್ಕೆ ದೇಣಿಗೆ ನೀಡಿದ್ದನ್ನು ಗುರುತಿಸಿ,ವಿದ್ಯಾ ಚೇತಕ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಘಟಕದಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆಗಾಗಿ ಪ್ರಾಂತ್ಯದ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ, ಗೋಲ್ಡನ್ ಘಟಕ ಪ್ರಶಸ್ತಿ ಸೇರಿದಂತೆ ವಿವಿಧ ಮನ್ನಣೆಗಳಿಗೆ ಪಾತ್ರರಾಗಿದ್ದಾರೆ. ವಲಯಾಧ್ಯಕ್ಷ ಜೇಸಿ ಸೆನೆಟರ್ ಅಭಿಲಾಷ್.ಬಿ.ಎ. ಘಟಕಾಧ್ಯಕ್ಷ ಜೇಸಿ ನಟೇಶ್ ಪೂಜಾರಿ ಅವರಿಗೆ ಈ ಎಲ್ಲಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.ವಲಯ ಉಪಾಧ್ಯಕ್ಷ ಜೇಸಿ ಸುಹಾಸ್ ಮರಿಕೆ, ಜೇಸಿ ರಂಜಿತ್ ಎಚ್ ಡಿ., ವಲಯ ಸಂಯೋಜಕ ಜೇಸಿ ಮೋಹನ್ ಚಂದ್ರ ತೋಟದ ಮನೆ, ಘಟಕದ ಕಾರ್ಯದರ್ಶಿ ಜೇಸಿ ಮಹೇಶ್ ಖಂಡಿಗ,ಪೂರ್ವಾಧ್ಯಕ್ಷ ಜೇಸಿ ಶೇಖರ್ ಗೌಂಡತ್ತಿಗೆ, ಸದಸ್ಯರಾದ ಜೇಸಿ ದಿವಾಕರ್ ಶಾಂತಿನಗರ, ಜೇಸಿ ಸಂದೀಪ್ ಉಪಸ್ಥಿತರಿದ್ದರು.
إرسال تعليق