ಉಪ್ಪಿನಂಗಡಿಯಲ್ಲಿ ಅಕ್ರಮ ಮದ್ಯ ಸೇವನೆ ಪ್ರಕರಣ – ಅರ್ಧ ಲೀಟರ್ ನೀರಿನ ಬಾಟಲಿಗಳು,ಲೋಟ ಸೇರಿದಂತೆ ಮದ್ಯ ಪ್ಯಾಕೆಟ್‌ಗಳು ವಶಕ್ಕೆ.

ಉಪ್ಪಿನಂಗಡಿ, ಜೂನ್ 12:
ಉಪ್ಪಿನಂಗಡಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಗುರುನಾಥ ಬಿ. ಹಾದಿಮನಿ ನೇತೃತ್ವದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಹಿರೇಬಂಡಾಡಿ ಗ್ರಾಮದ ಮುರದಮೇಲು ಪ್ರದೇಶದಲ್ಲಿ ಅಕ್ರಮ ಮದ್ಯ ಸೇವನೆ ಪ್ರಕರಣ ಬೆಳಕಿಗೆ ಬಂದಿದೆ.

ದಿನಾಂಕ 12-06-2025 ರಂದು ಸಂಜೆ 7 ಗಂಟೆಗೆ ರಾಮನಗರದಲ್ಲಿ ದೊರೆತ ಮಾಹಿತಿಯ ಆಧಾರದಲ್ಲಿ ಪೊಲೀಸ್‌ ತಂಡವು ಮುರದಮೇಲು ಪ್ರದೇಶಕ್ಕೆ ದೌಡಾಯಿಸಿತು. ಸಾರ್ವಜನಿಕ ಮಣ್ಣು ರಸ್ತೆಯ ಬದಿಯ ಗೇರು ಮರದ ಹಾಡಿಯಲ್ಲಿ, ಶ್ರೀಮತಿ ವಿಮಲ ಎಂಬವರು ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದರು. ಸ್ಥಳಕ್ಕೆ ದಾಳಿ ಮಾಡಿದಾಗ, ಅಲ್ಲಿ ಒಬ್ಬ ವ್ಯಕ್ತಿ ಮದ್ಯ ಸೇವಿಸುತ್ತಿದ್ದನು. ಆದರೆ, ಪೊಲೀಸರು ಧಾವಿಸುತ್ತಿದ್ದಂತೆ ಆತನು ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದಾನೆ.

ಸ್ಥಳ ಪರಿಶೀಲನೆಯಾದಾಗ, MYSORE LANCER WHISKY ಎನ್‌ಬಳಕೆಯ 90 ಎಂ.ಎಲ್. ಮದ್ಯದ ಟೆಟ್ರಾ ಪ್ಯಾಕೆಟ್‌ಗಳು 15 (ಒಂದರ ಮೌಲ್ಯ ರೂ. 50/-) ಒಟ್ಟು ರೂ. 750/- ಮೌಲ್ಯದ ಮದ್ಯ, ಮದ್ಯ ಸೇವನೆಗೆ ಬಳಸಿದ ಸ್ಟೀಲ್ ಗ್ಲಾಸ್‌ 1 (ಮೌಲ್ಯ ರೂ. 10/-) ಹಾಗೂ ½ ಲೀಟರ್ ನೀರಿನ ಪ್ಲಾಸ್ಟಿಕ್ ಬಾಟ್ಲಿ 1 ಅನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 50/2025, ಕಲಂ 15(a), 32(1) K.E. Act ಅನ್ವಯ ಪ್ರಕರಣ ದಾಖಲಿಸಲಾಗಿದೆ.

Post a Comment

أحدث أقدم