ಸುಬ್ರಹ್ಮಣ್ಯ: ಜುಲೈ 23ರಿಂದ ಕುಲ್ಕುಂದದಲ್ಲಿ ಲಕ್ಷ್ಮೀನಾರಾಯಣ ಹೋಮ, ಹತ್ತು ದಿನಗಳ ವೈದಿಕ ಸಂಭ್ರಮ.

ಸುಬ್ರಹ್ಮಣ್ಯ, ಜುಲೈ 22: ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವೇಶ್ವರ ದೇವಾಲಯದಲ್ಲಿ ಜುಲೈ 23ರಿಂದ ಆಗಸ್ಟ್ 1ರವರೆಗೆ ಹತ್ತು ದಿನಗಳ ಕಾಲ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಹಾಗೂ ಅನ್ನದಾನ ಸೇವೆ ಜರಗಲಿವೆ.


ಅಥರ್ವಣ ರಹಸ್ಯಗಳಲ್ಲಿ ಉಲ್ಲೇಖಿತವಾಗಿರುವ ಶ್ರೀ ಲಕ್ಷ್ಮೀನಾರಾಯಣ ಹೃದಯ ಮಂತ್ರಗಳ ಜಪ ಹಾಗೂ ಹೋಮ ಅತ್ಯಂತ
ಶಕ್ತಿಶಾಲಿಯಾದ ವೈದಿಕ ಕ್ರಮಗಳಲ್ಲಿ ಒಂದು ಎನ್ನಲಾಗುತ್ತದೆ. ಭಕ್ತರ ಕ್ಷೇಮ, ಕುಟುಂಬದ ಕಲ್ಯಾಣ ಹಾಗೂ ಸಮಾಜದ ಶಾಂತಿ ಸಮೃದ್ಧಿಗಾಗಿ ಈ ವಿಶೇಷ ಯಜ್ಞಾನುಷ್ಠಾನವನ್ನು ಆಯೋಜಿಸಲಾಗಿದೆ.


ಈ ಹೋಮದಲ್ಲಿ ಗರ್ಭಿಣಿಯರು ಪಾರಾಯಣವನ್ನು ಶ್ರವಣ ಮಾಡಿದರೆ ಹಾಗೂ ಅಭಿಮಂತ್ರಿತ ತೀರ್ಥವನ್ನು ಸೇವಿಸಿದರೆ, ಅವರ ಕುಲದಲ್ಲಿ ಶ್ರೀಪತಿ ಆನಂದವಾಗಿ ವಾಸಿಸುತ್ತಾನೆ ಎಂಬ ನಂಬಿಕೆ ಇದೆ. ಇದರ ಫಲವಾಗಿ ಗುಣವಂತ, ಬುದ್ಧಿವಂತ ಗಂಡು ಮಕ್ಕಳ ಜನನವಾಗುತ್ತೆ ಎಂಬ ಆಧ್ಯಾತ್ಮಿಕ ನಂಬಿಕೆಯನ್ನು ಜನರು ಹೊಂದಿದ್ದಾರೆ. ಜೊತೆಗೆ ಮಂದಮತಿ, ಬುದ್ಧಿಹೀನ ಮಕ್ಕಳು ಹುಟ್ಟುವುದಿಲ್ಲ ಎಂಬ ಮಾತುಗಳೂ ಈ ಸಂಬಂಧ ಹರಿದಾಡುತ್ತಿವೆ.


ಹೋಮದೊಂದಿಗೆ ಪ್ರತಿದಿನವೂ ಅನ್ನದಾನ ವ್ಯವಸ್ಥೆ ಇರುತ್ತದೆ. ದೇವಳದ ಆಡಳಿತ ಮಂಡಳಿ ಎಲ್ಲಾ ಭಕ್ತರಿಗೂ ಆಹ್ವಾನ ನೀಡಿದ್ದು, ಈ ಅಪರೂಪದ ಯಜ್ಞ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀ ದೇವರ ಅನುಗ್ರಹವನ್ನು ಪಡೆಯಬೇಕೆಂದು ವಿನಂತಿಸಿದೆ.

Post a Comment

أحدث أقدم