ಸುಬ್ರಹ್ಮಣ್ಯ ಜುಲೈ 20 : ಸುಬ್ರಹ್ಮಣ್ಯ ರೋಟರಿ ಕ್ಲಬ್,ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ಡಾ. ರವಿ ಸಮಾಜ ಸೇವಾ ಟ್ರಸ್ಟ್ ಇವರ ಜಂಟಿ ಆಶಯದಲ್ಲಿ ಇಂದು ಕುಮಾರಧಾರ ಕುಲುಕುಂದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.
ಕುಮಾರಧಾರ ಸೇತುವೆ ಬದಿಯಿಂದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಮೂಲಕವಾಗಿ ಕುಲುಕುಂದ ಮುಖ್ಯ ರಸ್ತೆಯ ಇಕ್ಕಲೆಗಳಲ್ಲಿ ಹಾಗೂ ಕಾಲೋನಿ ರಸ್ತೆಯ ಪರಿಸರದಲ್ಲಿ ಇದ್ದಂತಹ ಕಸ ಕಡ್ಡಿಗಳು,ಪ್ಲಾಸ್ಟಿಕ್ ಬಾಟ್ಲುಗಳು ಪ್ಲಾಸ್ಟಿಕ್ ಚೀಲಗಳು ಹಾಗೂ ಇನ್ನಿತರ ಕೊಚ್ಚೆ ವಸ್ತುಗಳನ್ನ ಹಿಕ್ಕಿ, ಶೇಖರಿಸಿ ಇಡೀ ಪರಿಸರವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಕೈಗೊಳ್ಳಲಾಯಿತು. ಇಂದಿನ ಈ ಸೇವಾ ಕಾರ್ಯದಲ್ಲಿ ಡಾlರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ನಾಯಕರು ಹಾಗೂ ಸ್ವಯಂಸೇವಕರುಗಳು ಸಂಘ ಸಂಸ್ಥೆಯ ಸ್ವಯಂಸೇವಕರು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಸಮಾಜ ಸೇವ ಟ್ರಸ್ಟ್ ನ ಮುಖ್ಯಸ್ಥರಾದ ಡಾl ರವಿ ಕಕ್ಕೆಪಧವು, ಸೀನಿಯರ್ ಚೇಂಬರ್ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್, ಸೀನರ್ ಚೇಂಬರ್ ಕಾರ್ಯದರ್ಶಿ ಹಾಗೂ ರೋಟರಿ ಪೂರ್ವ ಅಧ್ಯಕ್ಷ ಗೋಪಾಲ ಎಣ್ಣೆಮಜಲ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಆರ್ ಅವರು ಮಾತನಾಡುತ್ತಾ " ಸ್ವಚ್ಛ ಪರಿಸರದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಲೇಬೇಕು, ಕುಕ್ಕೆ ಕ್ಷೇತ್ರದಂತಹ ಪವಿತ್ರ ಕ್ಷೇತ್ರವನ್ನು ನಾವು ಸ್ವಚ್ಛತೆಯಿಂದ ಇಟ್ಟುಕೊಳ್ಳಲು ಶ್ರಮಿಸೋಣ.
ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯಇದೆ. ಆ ರೀತಿಯಾಗಿ ನಾವೆಲ್ಲರೂ ದೇವರ ಸೇವೆಯನ್ನು ನಿರಂತರವಾಗಿ ಮಾಡೋಣ ಎಂದು ಶುಭ ಹಾರೈಸಿದರು.
إرسال تعليق