📰 ಸುಬ್ರಹ್ಮಣ್ಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ: ಜನಸಂಖ್ಯೆ ನಿಯಂತ್ರಣವೇ ರಾಷ್ಟ್ರದ ಭದ್ರ ಭವಿಷ್ಯಕ್ಕೆ ಮೂಲ – ಶಾಸಕಿ ಭಾಗೀರಥಿ ಮುರುಳ್ಯ ಅಭಿಮತ.



ಸುಬ್ರಹ್ಮಣ್ಯ, ಜುಲೈ 11:
ತಾಲೂಕು ಪಂಚಾಯತ್ ಸುಳ್ಯ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಎಸ್‌ಎಸ್‌ಪಿಯು ಕಾಲೇಜು ಸುಬ್ರಹ್ಮಣ್ಯ, ರೋಟರಿ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ವಿಶ್ವ ಜನಸಂಖ್ಯಾ ದಿನಾಚರಣೆ ಭಾವಪೂರ್ಣವಾಗಿ ನಡೆಯಿತು. ಸಮಾರಂಭವು ಎಸ್‌ಎಸ್‌ಪಿಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ,

> "ಜನಸಂಖ್ಯಾ ಹೆಚ್ಚಳದ ಪರಿಣಾಮವಾಗಿ ಬಡತನ, ಆರ್ಥಿಕ ಹಿನ್ನಡೆ, ಉದ್ಯೋಗಲಾಭದ ಕೊರತೆ ಮುಂತಾದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಸರಕಾರದ ಕುಟುಂಬ ಕಲ್ಯಾಣ ಯೋಜನೆಗಳ ಮಾಹಿತಿ ಪ್ರತಿಯೊಬ್ಬ ನಾಗರಿಕರೂ ಅರಿತುಕೊಳ್ಳಬೇಕು. ಆರೋಗ್ಯ ಕಾರ್ಯಕರ್ತರು ಮನೆಗೆ ಬಂದಾಗ ಅವರನ್ನು ಗೌರವದಿಂದ ಸ್ವೀಕರಿಸಿ ಅವರ ಮಾರ್ಗದರ್ಶನವನ್ನು ಪಾಲನೆ ಮಾಡುವ ಜವಾಬ್ದಾರಿ ನಾವೆಲ್ಲರ ಮೇಲೆಯಿದೆ,” ಎಂದು ತಿಳಿಸಿದರು.


ಉದ್ಘಾಟನೆ ಮಾಡಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ,
ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದ ಬೆಳ್ಳಾರೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕಾಂತರಾಜು,
ಅವರು ಜನಸಂಖ್ಯೆ ನಿಯಂತ್ರಣದ ಪ್ರಾಮುಖ್ಯತೆಯ ಬಗ್ಗೆ ಆಳವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಸನ್ಮಾನ ಸಮಾರಂಭ:
ಈ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಹಾಗೂ ಪ್ರಥಮ ದರ್ಜೆ ಸಹಾಯಕ ಅರುಣೋದಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಅತಿಥಿಗಳು:
ಡಾ. ತ್ರಿಮೂರ್ತಿ (ತಾಲೂಕು ಆರೋಗ್ಯಾಧಿಕಾರಿ), ಡಾ. ಮಂಜುನಾಥ್ (ಪಂಜ ವೈದ್ಯಾಧಿಕಾರಿ), ಸೋಮಶೇಖರ್ ನಾಯಕ್ (ಎಸ್‌ಎಸ್‌ಪಿಯು ಕಾಲೇಜು ಪ್ರಾಚಾರ್ಯ), ಜಯಪ್ರಕಾಶ್ ಆರ್ (ರೋಟರಿ ಅಧ್ಯಕ್ಷ), ವಿಮಲಾ ರಂಗಯ್ಯ (ಲಯನ್ಸ್ ಕ್ಲಬ್ ಅಧ್ಯಕ್ಷೆ), ಪ್ರೊ. ಕೆ.ಆರ್. ಶೆಟ್ಟಿಗಾರ್ (ಲಯನ್ಸ್ ಪ್ರಾಂತೀಯ ಅಧ್ಯಕ್ಷ), ಪ್ರಮೀಳಾ (ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ), ರಾಜೇಶ್ ಎನ್.ಎಸ್ (ವಿದ್ಯಾರ್ಥಿ ಸಂಘದ ಅಧ್ಯಕ್ಷ), ತ್ರಿವೇಣಿ ದಾಮ್ಲೆ (ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ) ಮತ್ತು ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು.

ಸ್ವಾಗತ: ಜಯಪ್ರಕಾಶ್ ಆರ್
ನಿರೂಪಣೆ: ಉಪನ್ಯಾಸಕಿ ಶ್ರುತಿ ಅಶ್ವಥ್
ಧನ್ಯವಾದ: ಪ್ರಮೀಳಾ (ಆರೋಗ್ಯ ಶಿಕ್ಷಣಾಧಿಕಾರಿ)

Post a Comment

أحدث أقدم