ನೆಲ್ಯಾಡಿ, ಜುಲೈ 15:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೆಲ್ಯಾಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವವನ್ನು ಇಚ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಘಟಕದ ಪ್ರತಿನಿಧಿ ರಮೇಶ್ ಬಾಣಜಾಲು ಅಧ್ಯಕ್ಷತೆ ವಹಿಸಿದರು. ಉದ್ಘಾಟನಾ ಕಾರ್ಯಕ್ರಮವನ್ನು ನೆಲ್ಯಾಡಿ ಹೊರಠಾಣೆಯ ಹೆಡ್‌ಕಾನ್ಸ್‌ಸ್ಟೇಬಲ್ ಪ್ರವೀಣ್ ಕೆ.ಎಲ್. ನೆರವೇರಿಸಿ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ (ಇಚ್ಲಂಪಾಡಿ), ಉಪವಲಯ ಅರಣ್ಯಾಧಿಕಾರಿ ಕೆ.ಸುಬ್ರಹ್ಮಣ್ಯ, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಶೌರ್ಯ ಘಟಕದ ಕ್ಯಾಪ್ಟನ್ ಭವಾನಿ ಶಂಕರ್, ಮಾಸ್ಟರ್ ಪ್ರಶಾಂತ್, ವಲಯಾಧ್ಯಕ್ಷ ಕುಶಾಲಪ್ಪ ಗೌಡ, ಗಸ್ತು ಅರಣ್ಯಪಾಲಕ ದೇವಿಪ್ರಸಾದ್ ಉಪಸ್ಥಿತರಿದ್ದರು.
ಆನಂದ ಡಿ.ಬಿ. ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ನಿರ್ವಹಿಸಿದರು. ಘಟಕ ಸಂಯೋಜಕಿ ನಮಿತಾ ಎಸ್. ಶೆಟ್ಟಿ ಶೌರ್ಯದ ವಾರ್ಷಿಕ ವರದಿಯನ್ನು ಮಂಡಿಸಿದರು. ಸ್ವಯಂ ಸೇವಕಿ ಅಮಿತ ಸ್ವಾಗತಿಸಿ, ಸೇವಾಪ್ರತಿನಿಧಿ ವೇದಾ ಪಿ. ವಂದಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ವೀಕ್ಷಕ ಡಿ.ಪಿ. ಜನಾರ್ದನ, ಜನಜಾಗೃತಿ ವೇದಿಕೆ ಸದಸ್ಯ ತುಕಾರಾಮ ರೈ ಹೊಸಮನೆ, ವಿವಿಧ ಒಕ್ಕೂಟಗಳ ಅಧ್ಯಕ್ಷರು, ಸೇವಾಪ್ರತಿನಿಧಿಗಳು ಹಾಗೂ ಶೌರ್ಯ ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.
---
📌 ಶೌರ್ಯ ಸೇವಕರಿಗೆ ಗೌರವ–ಸ್ಮರಣೆ:
ಕಾರ್ಯಕ್ರಮದ ವೇಳೆಯಲ್ಲಿ ಶೌರ್ಯ ಘಟಕದ ಸ್ವಯಂ ಸೇವಕರಿಗೆ ನೆಲ್ಯಾಡಿ ಒಕ್ಕೂಟದ ಸೇವಾಪ್ರತಿನಿಧಿ ಹೇಮಾವತಿ ಜೆ. ಅವರಿಂದ ಶಾಲು ಹಾಕಿ ಗೌರವಿಸಲಾಯಿತು. ಜೊತೆಗೆ ಎಲ್ಲಾ ಒಕ್ಕೂಟದ ಅಧ್ಯಕ್ಷರ ವತಿಯಿಂದ ಸದಸ್ಯರಿಗೆ ಮೊಬೈಲ್ ಕವರ್ ಹಾಗೂ ಕ್ಯಾಪ್‌ಗಳನ್ನು ವಿತರಣೆ ಮಾಡಲಾಯಿತು.
إرسال تعليق