🚌 ಸುಬ್ರಹ್ಮಣ್ಯ - ದೇರಣೆ - ಗುಂಡ್ಯ ಮಾರ್ಗಕ್ಕೆ ಹೊಸ KSRTC ಬಸ್ ಸೇವೆ ಪ್ರಾರಂಭ.


📍 ದೇರಣೆ, ಸುಬ್ರಹ್ಮಣ್ಯ | ಜುಲೈ 21, 2025
ಸುಬ್ರಹ್ಮಣ್ಯ - ದೇರಣೆ - ಗುಂಡ್ಯ ಮಾರ್ಗದ ಜನರು ಹಲವಾರು ವರ್ಷಗಳಿಂದ ಬಸ್ ಸಂಚಾರಕ್ಕೆ ನಿರೀಕ್ಷೆಯಲ್ಲಿ ಇದ್ದ ಬೇಡಿಕೆ ಇಂದು ಸಾಕಾರಗೊಂಡಿದೆ. ಈ ಮಾರ್ಗಕ್ಕೆ ನೂತನವಾಗಿ KSRTC ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. 

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಚಿಂತನೆಯ ಫಲವಾಗಿ ಈ ಮಾರ್ಗಕ್ಕೆ ಬಸ್ ಸಂಚಾರ ಕಲ್ಪಿಸಲಾಗಿದೆ. ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿ ಸಾರ್ವಜನಿಕ ಅನುಕೂಲಕ್ಕಾಗಿ ಬಸ್ ಸೇವೆ ಆರಂಭಿಸಲು ಮುಂದಾಗಿದ್ದರು.

ಬಸ್ ಸಂಚಾರಕ್ಕೆ ಚಾಲನೆ ನೀಡಿದ ಶಾಸಕರು, ತೆಂಗಿನಕಾಯಿ ಒಡೆದು ಶ್ರೇಯಸ್ಸಿನ ಸಂಕೇತವಾಗಿ ಕಾರ್ಯಕ್ರಮಕ್ಕೆ ಆರಂಭ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಧುಸೂದನ್ ಕೊಂಬಾರು, KDP ಸದಸ್ಯ ಪದ್ಮನಾಭ, KSRTC ಅಧಿಕಾರಿಗಳು, ಸ್ಥಳೀಯ ವಿದ್ಯಾರ್ಥಿಗಳು, ಪಲಾನುಭವಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಹೊಸ ಬಸ್ ಸೇವೆ ದೇರಣೆ ಭಾಗದ ಜನರಿಗೆ ಉಚಿತ, ಸುಲಭ ಮತ್ತು ಸುರಕ್ಷಿತ ಸಂಚಾರದ ಮಾರ್ಗವಾಗಲಿದೆ. ಶಾಲಾ ಮಕ್ಕಳಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಇದು ನಿತ್ಯದ ಸಂಚಾರದ ಪ್ರಮುಖ ಭಾಗವಾಗಲಿದೆ.

Post a Comment

أحدث أقدم