ಸುಬ್ರಹ್ಮಣ್ಯ, ಆಗಸ್ಟ್ 2:ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯನ್ನು ಆಗಸ್ಟ್ 4, ಸೋಮವಾರದಂದು ಪೂರ್ವಾಹ್ನ 10.30ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಲ್ಲೀಶ ಸಭಾಭವನದಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ.
ಈ ಸಭೆಯಲ್ಲಿ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಶ್ರೀಮತಿ ಸುಜಾತ. ಕೆ, ಉಪಾಧ್ಯಕ್ಷ ಶ್ರೀ ರಾಜೇಶ್ ಎನ್.ಎಸ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಮಹೇಶ್ ಜಿ.ಎನ್, ಕಾರ್ಯದರ್ಶಿ ಶ್ರೀ ಮೋನಪ್ಪ ಡಿ, ಸೇರಿದಂತೆ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಲಿದ್ದಾರೆ. ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ನೋಡೆಲ್ ಅಧಿಕಾರಿಯಾಗಿ ಶ್ರೀಮತಿ ಶೈಲಜಾ ಉಪಸ್ಥಿತರಿರಲಿದ್ದಾರೆ.
ಸಭೆಯ ಅಂಗವಾಗಿ ಗ್ರಾಮಸ್ಥರು ತಮ್ಮ ತಮ್ಮ ಕುಂದುಕೊರತೆಗಳು, ಸಲಹೆ ಸೂಚನೆಗಳನ್ನು ಸ್ಥಳದಲ್ಲಿಯೇ ಮಂಡಿಸಬಹುದಾಗಿದೆ. ಇದರೊಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಕಿ ಇರುವ ಕಟ್ಟಡ ತೆರಿಗೆ, ಭೂಮಿ ತೆರಿಗೆ, ನೀರಿನ ಶುಲ್ಕ, ಅಂಗಡಿ ಬಾಡಿಗೆ ಮತ್ತು ಘನ ತ್ಯಾಜ್ಯ ಶುಲ್ಕವನ್ನು ಶೀಘ್ರ ಪಾವತಿಸಿ ಅಭಿವೃದ್ಧಿಗೆ ಸಹಕರಿಸಲು ಮನವಿ ಮಾಡಲಾಗಿದೆ.
ಗ್ರಾಮಸಭಾ ಸದಸ್ಯರು ಚರ್ಚೆಗೆ ಬೇಕಾದ ಯಾವುದೇ ವಿಷಯವನ್ನು ಸಭೆಗೆ ಮುಂಚಿತವಾಗಿ ಲಿಖಿತವಾಗಿ ಸಲ್ಲಿಸಲು ಸೂಚಿಸಲಾಗಿದೆ.
ಪಂಚಾಯತ್ ವತಿಯಿಂದ ಗ್ರಾಮಸ್ಥರೆಲ್ಲರಿಗೂ ಈ ಸಭೆಗೆ ಆದರದ ಆಹ್ವಾನ ನೀಡಲಾಗಿದೆ. ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸ್ಥಳೀಯ ಸಮಸ್ಯೆಗಳ ಸ್ಪಷ್ಟ ಪರಿಹಾರ ಸಾಧ್ಯವಾಗಲಿದೆ ಎಂಬ ನಂಬಿಕೆ ವ್ಯಕ್ತವಾಗಿದೆ.
إرسال تعليق