ಕುಕ್ಕೆ ಸುಬ್ರಹ್ಮಣ್ಯ, ಆಗಸ್ಟ್ 2:ಶ್ರೀ ದೇವಳದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ 22 ವರ್ಷಗಳಿಂದ ಸಂಸ್ಕೃತ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರಘು ಬಿಜೂರ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಘು ಬಿಜೂರ್ ಅವರಿಗೆ ಶ್ರೀ ದೇವಳದ ಆಡಳಿತ ಮಂಡಳಿ ಮತ್ತು ವಿದ್ಯಾಸಂಸ್ಥೆಗಳ ವಿವಿಧ ಸಂಘಟನೆಗಳಿಂದ ಸನ್ಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ ವಹಿಸಿದ್ದರು. ಅವರು ಮಾತನಾಡುತ್ತಾ, “ಪಠ್ಯಪಾಠದ ಜೊತೆ ಮಕ್ಕಳಿಗೆ ಪಠ್ಯೇತರ ಕೌಶಲ್ಯಗಳ ಅಗತ್ಯವಿದೆ. ರಘು ಬಿಜೂರು ಅವರು ಸಂಗೀತ, ಭಜನೆ ಮೂಲಕ ಮಕ್ಕಳಲ್ಲಿ ಕಲಾತ್ಮಕ ಮನಸ್ಸನ್ನು ಬೆಳೆಸಿದವರು. ಇಂತಹ ಗುರುಗಳ ನಿವೃತ್ತಿ ವಿದ್ಯಾಸಂಸ್ಥೆಗೆ ತುಂಬಲಾರದ ನಷ್ಟ” ಎಂದು ಅಭಿಪ್ರಾಯಪಟ್ಟರು.ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶೈಕ್ಷಣಿಕ ಉಪಸಮಿತಿಯ ರಚನೆಯ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಮುಖ್ಯಕಾರ್ಯನಿರ್ವಹಣಾಧಿಕಾರಿ,ಅರವಿಂದ ಅಯ್ಯಪ್ಪ ಸುತಗುಂಡಿ,ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಶೈಕ್ಷಣಿಕ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್, ಡಾ. ರಘು, ಅಶೋಕ್ ನೆಕ್ರಾಜೆ, ಪವನ್ ಎಂ.ಡಿ, ನಿವೃತ್ತ ಮುಖ್ಯಗುರು ಕೆ.ಯಶವಂತ ರೈ, ನಿವೃತ್ತ ಪ್ರಾಂಶುಪಾಲ ಎಸ್.ಎನ್. ಭಟ್, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಶೀತಲ್ ಯು.ಕೆ, ಶಿಕ್ಷಣ ಸಂಯೋಜಕಿ ಸಂಧ್ಯಾ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಚಾರ್ಯ ಸೋಮಶೇಖರ ನಾಯಕ್, ಮುಖ್ಯಗುರು ನಂದಾ ಹರೀಶ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ತ್ರಿವೇಣಿ ದಾಮ್ಲೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಸಹಶಿಕ್ಷಕ ಎಂ. ಕೃಷ್ಣ ಭಟ್, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ, ವಿದ್ಯಾರ್ಥಿ ನಾಯಕ ಶ್ರೇಯಸ್ ಮತ್ತು ಪ್ರನ್ವಿತ್ ವೇದಿಕೆಯಲ್ಲಿ ಭಾಗಿಯಾಗಿದ್ದರು.
ಸನ್ಮಾನ ಸ್ವೀಕರಿಸಿದ ರಘು ಬಿಜೂರ್ ಅವರು ದಾಸರ ಪದಗಳ ಗಾಯನ ನಡೆಸಿ ಕೃತಜ್ಞತೆ ವ್ಯಕ್ತಪಡಿಸಿದರು. ಉಪನ್ಯಾಸಕಿ ಶ್ರುತಿ ಅಶ್ವತ್ಥ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಳಿನಿ ಮೋಹನ್ ಸನ್ಮಾನಪತ್ರವನ್ನು ವಾಚಿಸಿದರು ಮತ್ತು ಶಿಕ್ಷಕ ಸುರೇಶ್ ವಂದಿಸಿದರು.
إرسال تعليق