ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಶೇಕಡ 100 ಸಾಲ ವಸೂಲಾತಿ ಮಾಡಿರುವುದಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ .

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವತೋಮುಖ ಪ್ರಗತಿಯ ಸಾಧನೆಗೆ ಸಂಬಂಧಿಸಿದ ಕೇಂದ್ರ ಸಹಕಾರಿ ಬ್ಯಾಂಕಿನಿಂದ ನಿರಂತರ 9 ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆದುಕೊಂಡು ಬಂದಿರುತ್ತದೆ.
2020 ನೇ ಇಸವಿಯಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಜಿಲ್ಲಾ ಮಟ್ಟದಲ್ಲಿಯೇ ಉತ್ತಮ ಸಹಕಾರಿ ಸಂಘ ಎಂಬ ಪ್ರಶಸ್ತಿಯನ್ನು ಪಡೆದಿದೆ. ಕಳೆದ ಸಾಲಿನಲ್ಲಿ ಸಂಘವು ಶೇಕಡ 100 ಸಾಲ ವಸೂಲಾತಿ ಮಾಡಿರುವುದಕ್ಕೆ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿಯನ್ನು ಪಡೆದಿರುತ್ತದೆ. ಪ್ರಸ್ತುತ ವರ್ಷ ಸಂಘವು ಶೇಕಡ 100 ಸಾಲ ವಸೂಲಾತಿ ಮಾಡಿರುವುದಕ್ಕೆ ತಾರೀಕು 30-08-2025 ರಂದು ನಡೆದ ದ.ಕ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

         ಸಂಘದ ಪರವಾಗಿ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಬಾಣಜಾಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಎಂ ಉಪಾಧ್ಯಕ್ಷರಾದ ರವಿಚಂದ್ರ ಹೊಸವಕ್ಲು ನಿರ್ದೇಶಕರಾದ ಶ್ರೀಮತಿ ಉಷಾ ಅಂಚನ್, ಭಾಸ್ಕರ ರೈ, ಶ್ರೀಮತಿ ಶೇಷಮ್ಮ,ಬಾಬು ನಾಯ್ಕ, ಸಿಬ್ಬಂದಿ ಧನುಷ್ ರವರುಗಳಿಗೆ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ/ ಎಂ ಎನ್ ರಾಜೇಂದ್ರ ಕುಮಾರ್ ಉಪಾಧ್ಯಕ್ಷರಾದ ವಿನಯಕುಮಾರ್ , ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ,ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶಶಿಕುಮಾರ್ ಬಾಲ್ಯೋಟ್ಟು ನಿರ್ದೇಶಕರುಗಳಾದ ಜಯರಾಮ್ ರೈ , ದೇವಿಪ್ರಸಾದ್ ಶೆಟ್ಟಿ , ಕುಶಾಲಪ್ಪ ಗೌಡ ಪೂವಜೆ ಹಾಗೂ ಇತರ ನಿರ್ದೇಶಕರುಗಳು ಜೊತೆಯಾಗಿ ಪ್ರಶಸ್ತಿ ಪ್ರಧಾನ ಮಾಡಿದರು .

      65 ವರ್ಷಗಳ ಇತಿಹಾಸ ಹೊಂದಿರುವ ಸಂಗವು. 2024-25 ನೆ ಆರ್ಥಿಕ ವರ್ಷದಲ್ಲಿ 552.59 ಕೋಟಿ ರೂ ವಾರ್ಷಿಕ ವ್ಯವಹಾರವನ್ನು ಮಾಡಿ 1.90 ಕೋಟಿ ರೂ ಲಾಭ ಗಳಿಸಿದೆ. ಸಂಘದಲ್ಲಿ 6448 ಸದಸ್ಯರಿದ್ದು 9.39 ಕೋಟಿ ಪಾಲು ಬಂಡವಾಳವಿರುತ್ತದೆ. 33 ಕೋಟಿ ರೂ ಠೇವಣಿ ಇದ್ದು, 85 ಕೋಟಿ ರೂ ಸದಸ್ಯರ ಸಾಲವಿರುತ್ತದೆ. 116 ಕೋಟಿ ರೂ ದುಡಿಯುವ ಬಂಡವಾಳವಿರುತ್ತದೆ, ಹೀಗೆ ಸಂಘವು.ನೆಲ್ಯಾಡಿ,ಕೌಕ್ರಾಡಿ ,ಇಚ್ಲಂಪಾಡಿ ,ಶಿರಾಡಿ, ಗೋಳಿತೊಟ್ಟು ಕೂನಲು, ಅಲಂತಾಯ ಹೀಗೆಯೇ 7 ಕಂದಾಯ ಗ್ರಾಮಗಳನ್ನು ಹೊಂದಿರುತ್ತದೆ ಸಂಘದ ಕೇಂದ್ರ ಕಚೇರಿ , ಗೋಳಿತೊಟ್ಟು ಶಾಖೆ, ಶಿರಾಡಿ ಶಾಖೆಗಳಲ್ಲಿ ಎಲ್ಲಾ ರೀತಿಯ ವ್ಯವಹಾರ ಮಾಡಿ ಇಚಿಲಂಪಾಡಿ ಶಾಖೆಯಲ್ಲಿ ಪಡಿತರ ವ್ಯವಹಾರವನ್ನು ಮಾಡುತ್ತಿದೆ. ಕೇಂದ್ರ ಕಚೇರಿ ಮತ್ತು ಗೋಳಿತೊಟ್ಟು ಹಾಗೂ ಶಿರಾಡಿ ಶಾಖೆಯು ಸ್ವಂತ ಕಟ್ಟಡದಲ್ಲಿ ವ್ಯವಹಾರ ಮಾಡುತ್ತಿದೆ.  

ಸಂಘದ ಆಡಳಿತ ಮಂಡಳಿಯಲ್ಲಿ 12 ಮಂದಿ ಚುನಾಯಿತ ನಿರ್ದೇಶಕರಿದ್ದು ಅಧ್ಯಕ್ಷರಾಗಿ ಶ್ರೀ ಬಾಲಕೃಷ್ಣ ಬಾಣಜಾಲು ಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಉಪಾಧ್ಯಕ್ಷರಾದ ರವಿಚಂದ್ರ ಹೊಸವಕ್ಲು ನಿರ್ದೇಶಕರುಗಳಾದ ಜಯಾನಂದ ಬಂಟ್ರಿಯಾಲ್, ಸರ್ವೋತ್ತಮ ಗೌಡ, ಉಷಾ ಅಂಚನ್ , ಜಿನ್ನಪ್ಪ ಗೌಡ, ಜನಾರ್ದನ ಗೌಡ ಬರೆಮೇಲು, ಸುಧಾಕರ ಬಿ ,ಶ್ರೀಮತಿ ಶೇಷಮ್ಮ ಭಾಸ್ಕರ ರೈ, ಬಾಬು ನಾಯ್ಕ, ಹರೀಶ್ ಬಿ, ವಲಯ ಮೇಲ್ವಿಚಾರರಾದ ವಸಂತ ಎಸ್ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ದಯಾಕರ ರೈ ಕೆ ಯ0 ರವರು ಕಾರ್ಯನಿರ್ವಹಿಸುತ್ತಿದ್ದಾರೆ.

Post a Comment

Previous Post Next Post