ಬಂಟ್ವಾಳ:ಜೂನ್ 13, 2025 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಉಮ್ಮರ್ ಫಾರೂಕ್ ಎಂಬವರು ದೇರಾಜೆ ಬಳಿ ಇಬ್ಬರು ಅಪರಿಚಿತರು ಕೊಲೆ ಯತ್ನ ನಡೆಸಿದ್ದಾರೆಂದು ದೂರು ನೀಡಿದ್ದರು. ಆದರೆ ತನಿಖೆಯಲ್ಲಿ ದೂರು ಸುಳ್ಳು ಎಂದು ದೃಢಪಟ್ಟ ಹಿನ್ನೆಲೆಯಲ್ಲಿ, ಆಗಸ್ಟ್ 26, 2025 ರಂದು ಉಮ್ಮರ್ ಫಾರೂಕ್ ವಿರುದ್ಧ ಠಾಣಾ ಅ.ಕ್ರ. 128/2025ರಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 192, 353(1)(ಬಿ), 230(1), 248(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದರೊಂದಿಗೆ, ಆಗಸ್ಟ್ 28, 2025 ರಂದು ಫೇಸ್‌ಬುಕ್ ಪೇಜ್‌ನಲ್ಲಿ ಈ ಸಂಬಂಧ ಕಾನೂನುಬದ್ಧ ಆಧಾರವಿಲ್ಲದೆ ಸುಳ್ಳು ಮಾಹಿತಿ ಹಂಚಿಕೆಯಾಗಿದೆ ಎಂಬ ದೂರಿನ ಆಧಾರದ ಮೇಲೆ, ಅಶ್ರಫ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 130/2025ರಲ್ಲಿ ಕಲಂ 353(1)(B)(2), 192 BNS ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Post a Comment