ಮಂಗಳೂರು ಸಿಸಿಬಿ ಪೊಲೀಸರ ಬೃಹತ್ ಕಾರ್ಯಾಚರಣೆ: 123 ಕೆಜಿ ಗಾಂಜಾ ವಶ, ಮೂವರು ಆರೋಪಿಗಳ ಬಂಧನ.

ಮಂಗಳೂರು, ಆಗಸ್ಟ್ 1, 2025:
ಮಂಗಳೂರು ನಗರ ಕ್ರೈಂ ಬ್ರಾಂಚ್ (CCB) ಪೊಲೀಸರು ಮಾದಕ ವಸ್ತುಗಳ ಅಕ್ರಮ ಸಾಗಾಟದ ವಿರುದ್ಧ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಬೃಹತ್ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮುಂಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತಂಡವು 123 ಕಿಲೋಗ್ರಾಂ ಗಾಂಜಾ ಹಾಗೂ ಅದನ್ನು ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಜಪ್ತಿಗೊಳಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆ ಮಂಗಳವಾರ (31-07-2025) ರಂದು ಮೂಡಬಿದಿರೆ ತಾಲ್ಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್ ನ ಮಠದಕೆರೆ ಎಂಬ ಸ್ಥಳದಲ್ಲಿ ನಡೆದಿದೆ. ಸಿಸಿಬಿ ತಂಡವು ಖಚಿತ ಮಾಹಿತಿಯ ಆಧಾರದಲ್ಲಿ ಸ್ಥಳಕ್ಕೆ ದೌಡಾಯಿಸಿ, ಆಂಧ್ರಪ್ರದೇಶದಿಂದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.





ಬಂಧಿತ ಆರೋಪಿಗಳ ವಿವರ:

1. ಮಸೂದ್ ಎಂಕೆ (45), ತಂದೆ: ದಿ|| ಖಾಲೀದ್ ಹಾಜಿ, ಮೊಗರು ಹೌಸ್, ಆಡೂರು, ಉರ್ದೂರು ಪೋಸ್ಟ್, ಕಾಸರಗೋಡು, ಕೇರಳ.

2. ಮೊಹಮ್ಮದ್ ಆಶಿಕ್ (24), ತಂದೆ: ದಿ|| ಎಮ್.ಪಿ. ಅಬ್ದುಲ್ಲಾ, ಚೆಂದಮೂಲ ಹೌಸ್, ದೇಲಂಪಾಡಿ, ಕಾಸರಗೋಡು, ಕೇರಳ.

3. ಸುಬೇರ್ (30), ತಂದೆ: ಇಬ್ರಾಹಿಂ, ದೇಲಂಪಾಡಿ, ಕಾಸರಗೋಡು, ಕೇರಳ.


ಪೋಲೀಸರು ಆರೋಪಿಗಳಿಂದ 123 ಕೆಜಿ ಗಾಂಜಾ, ಎರಡು ಕಾರುಗಳು (KA-21-P-9084 ಮತ್ತು

 KL-14-AF-7010) ಮತ್ತು ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಆಸ್ತಿಯ ಒಟ್ಟು ಮೌಲ್ಯ ಸುಮಾರು ರೂ. 46,20,000 ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮಾದಕ ವಸ್ತುಗಳ ವಿರುದ್ಧ ಸಿಸಿಬಿ ಹಾಗೂ ಮಂಗಳೂರು ನಗರ ಪೊಲೀಸರು ಕೈಗೊಂಡಿರುವ ಕ್ರಮ ಶ್ಲಾಘನೀಯವಾಗಿದೆ.


ಮಂಗಳೂರಿನಲ್ಲಿ ಮಾದಕ ವಸ್ತುಗಳ ಅಕ್ರಮ ಜಾಲವನ್ನು ಸಂಪೂರ್ಣವಾಗಿ ಬೇಧಿಸುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಇಲಾಖೆ ನಿರಂತರವಾಗಿ ಶಕ್ತಿಶಾಲಿ ಕಾರ್ಯಾಚರಣೆ ನಡೆಸುತ್ತಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.

Post a Comment

أحدث أقدم