ಬಂಟ್ವಾಳ, ಜುಲೈ 28:ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಮಣಿ ನಾಲ್ಕೂರು ಗ್ರಾಮದ ಪೂಂಜೂರು ಎಂಬಲ್ಲಿ ದಿನಾಂಕ 03 ಜುಲೈ 2025 ರಿಂದ 22 ಜುಲೈ 2025ರ ಅವಧಿಯಲ್ಲಿ ಸುಮಾರು ₹2,20,000 ಮೌಲ್ಯದ ಒಣ ಅಡಿಕೆ ಕಳವುಗೊಳ್ಳಲಾಗಿತ್ತು. ಈ ಕುರಿತು ಜುಲೈ 23ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ.112/2025, ಕಲಂ 306, BNS ರಂತೆ ಪ್ರಕರಣ ದಾಖಲಿಸಲಾಯಿತು.
ಪ್ರಕರಣದ ಗಂಭೀರತೆಯನ್ನು ಮನಗಂಡ ಬಂಟ್ವಾಳ ಪೊಲೀಸ್ ತಂಡವು ಶ್ರೀ ಶಿವಕುಮಾರ್ ಬಿ., ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿತು. ತಂಡದಲ್ಲಿ ಉಪನಿರೀಕ್ಷಕ ಮಂಜುನಾಥ್ ಟಿ., ಎಎಸ್‌ಐ ಜಿನ್ನಪ್ಪ ಗೌಡ, ಹಾಗೂ ಪೊಲೀಸ್ ಸಿಬ್ಬಂದಿ ರಾಜೇಶ್, ನಝೀರ್, ಲೋಕೇಶ್, ಪ್ರಶಾಂತ್, ಮಾರುತಿ ಹಾಗೂ ಹನುಮಂತ ಭಾಗವಹಿಸಿದ್ದರು.
ತೀಕ್ಷ್ಣ ತನಿಖೆಯ ಬಳಿಕ, ದಿನಾಂಕ 28-07-2025 ರಂದು ಪೈಚಾರು ಗ್ರಾಮ, ಸುಳ್ಯ ಮೂಲದ ಸತೀಶ್ (29) ಎಂಬ ವ್ಯಕ್ತಿಯನ್ನು ಬಂಧಿಸಲಾಯಿತು. ಆರೋಪಿಯಿಂದ:
15 ಚೀಲ ಒಣ ಅಡಿಕೆ (₹74,000 ಮೌಲ್ಯ)
ಕಳವು ಮಾಡಿದ್ದ ಅಡಿಕೆಯನ್ನು ಮಾರಾಟ ಮಾಡಿದ ₹70,000 ನಗದು
ಆಪೆ ಗೂಡ್ಸ್ ವಾಹನ (ಅಂದಾಜು ಮೌಲ್ಯ ₹80,000)
ಒಟ್ಟು ₹2,24,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ಬಂಟ್ವಾಳ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಈ ಪ್ರಕರಣವನ್ನು ಪತ್ತೆಹಚ್ಚುವ ಮೂಲಕ ಸಾರ್ವಜನಿಕಲ್ಲಿ ನಂಬಿಕೆ ಹೆಚ್ಚಿಸುತ್ತಿದ್ದಾರೆ.
إرسال تعليق