ಧರ್ಮಸ್ಥಳ ಪೊಲೀಸ್ ಠಾಣಾ ಪ್ರಕರಣ: ಆರೋಪಿ ಸೋಮನಾಥ ಸಫಲ್ಯನ ದಸ್ತಗಿರಿ, 14 ದಿನಗಳ ನ್ಯಾಯಾಂಗ ಬಂಧನ.

ಧರ್ಮಸ್ಥಳ, ಆಗಸ್ಟ್ 7:ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಿನಾಂಕ 06.08.2025 ರಂದು ದಾಖಲಾಗಿದ್ದ ಅ.ಕ್ರ: 46/2025 ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದು ಸಂಭವಿಸಿದೆ. ಈ ಪ್ರಕರಣದಲ್ಲಿ ಆರೋಪಿ ಎನ್ನಲಾದ ಧರ್ಮಸ್ಥಳ ಗ್ರಾಮದ ನಿವಾಸಿ ಸೋಮನಾಥ ಸಫಲ್ಯ (ವಯಸ್ಸು 50) ಎಂಬಾತನನ್ನು ಪೊಲೀಸ್ ಇಲಾಖೆ ಗುರುವಾರ, ಆಗಸ್ಟ್ 7ರಂದು ಕೊಕ್ಕಡದಲ್ಲಿ ದಸ್ತಗಿರಿ ಮಾಡಿದೆ.

ದಸ್ತಗಿರಿಗೊಂಡ ನಂತರ ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ಪೊಲೀಸರು ಮುಂದಿನ ತನಿಖೆ ಮುಂದುವರೆಸುತ್ತಿರುವುದಾಗಿಯೂ, ಇನ್ನಷ್ಟು ಆರೋಪಿಗಳ ಪತ್ತೆಗಾಗಿ ಕ್ರಮಜರಗುತ್ತಿರುವ ಸಾಧ್ಯತೆಗಳಿವೆಯೆಂಬ ಮಾಹಿತಿಯೂ ಲಭ್ಯವಾಗಿದೆ.

Post a Comment

أحدث أقدم