ಮಂಗಳೂರು: ಎಂ.ಡಿ.ಎಂ.ಎ ಮಾದಕ ವಸ್ತು ಮಾರಾಟದ ವೇಳೆ ನಾಲ್ವರ ಬಂಧನ – 51 ಗ್ರಾಂ ಎಂ.ಡಿ.ಎಂ.ಎ, ವಾಹನ, ನಗದು ವಶ!

ಮಂಗಳೂರು, ಆಗಸ್ಟ್ 7: ಮಂಗಳೂರು ನಗರ ಸೆನ್ ಕ್ರೈಂ ಠಾಣೆ ಪೊಲೀಸರು ಮಹತ್ವದ ದಾಳಿಯಲ್ಲಿ ಎಂ.ಡಿ.ಎಂ.ಎ ಮಾದಕ ವಸ್ತು ಮಾರಾಟದ ಆರೋಪದಲ್ಲಿ ನಾಲ್ವರನ್ನು ಬಂಧಿಸಿ, ಸುಮಾರು ₹1.27 ಲಕ್ಷ ಮೌಲ್ಯದ ಮಾದಕ ವಸ್ತು, ವಾಹನ, ನಗದು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರ ವಿವರ:
1. ದೇವರಾಜ್ ಪೂಜಾರಿ @ ದೇವು (38), ಉಡುಪಿ ತಾಲೂಕು.
2. ಜೀವನ್ ಅಮೀನ್ (32), ಕಾಪು ತಾಲೂಕು.
3. ಇಮ್ರಾನ್ (40), ಮೂಡುಶೆಡ್ಡೆ, ಮಂಗಳೂರು.
4. ಬಿ.ಮೊಹಮ್ಮದ್ ಹನೀಫ್ (56), ಅಶೋಕ್ ನಗರ, ಮಂಗಳೂರು.
ಪ್ರಕರಣದ ಹಿನ್ನೆಲೆ:
ಆಗಸ್ಟ್ 7 ರಂದು ಬಂದ ಖಚಿತ ಮಾಹಿತಿಯ ಆಧಾರದಲ್ಲಿ, ಮಂಗಳೂರು ನಗರದ ಪಡುಕೋಡಿ ಗ್ರಾಮದ ಪಡ್ಪು ಹೌಸ್ ಬಳಿ ಮಾದಕ ವಸ್ತು ಮಾರಾಟಕ್ಕೆ ಸಿದ್ಧತೆ ನಡೆಯುತ್ತಿರುವ ಮಾಹಿತಿ ಮೇರೆಗೆ ದಾಳಿ ನಡೆಯಿತು. ಈ ವೇಳೆ:
51 ಗ್ರಾಂ ಎಂ.ಡಿ.ಎಂ.ಎ (ಪ್ರತಿ ಗ್ರಾಂ ಮೌಲ್ಯ ₹2,500/-)
07 ಮೊಬೈಲ್ ಫೋನ್‌ಗಳು
ಮಾರುತಿ ಬೆಲೆನೋ ಕಾರು
ಮಹೀಂದ್ರಾ ಸ್ಕಾರ್ಪಿಯೋ ಕಾರು
ನಗದು ₹11,990/-

ಇತರ ವಸ್ತುಗಳು
ವಶಪಡಿಸಿಕೊಳ್ಳಲಾಗಿದೆ.
ಆರೋಪಿತರ ಹಿನ್ನೆಲೆ:

ದೇವರಾಜ್ ಪೂಜಾರಿ ಉಡುಪಿ, ಶಿವಮೊಗ್ಗ ಹಾಗೂ ಮಂಗಳೂರು ನಗರಗಳಲ್ಲಿ ಮಾದಕ ವಸ್ತು ಪೆಡ್ಲರ್ ಆಗಿ ಗುರುತಿಸಲ್ಪಟ್ಟಿದ್ದಾನೆ. ಉಳಿದ ಮೂವರು ಆರೋಪಿತರೂ ಮಂಗಳೂರು ನಗರದಲ್ಲೇ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದವರೆಂದು ತನಿಖೆಯಿಂದ ತಿಳಿದುಬಂದಿದೆ. ಎಂ.ಡಿ.ಎಂ.ಎ ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂಬುದು ಕೂಡ ಪತ್ತೆಯಾಗಿದೆ.

ತನಿಖೆ ಮುಂದುವರಿದಿದ್ದು, ಮತ್ತಷ್ಟು ಮಹತ್ವದ ಮಾಹಿತಿ ಬಯಲಾಗುವ ನಿರೀಕ್ಷೆಯಿದೆ.

ಈ ಪ್ರಕರಣದ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೆನ್ ಕ್ರೈಂ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

Post a Comment

أحدث أقدم