ಕೌಕ್ರಾಡಿ ಗ್ರಾಮದ ದೊಂತಿಲ ಶ್ರೀ ಮಹಾವಿಷ್ಣು ಸುಬ್ರಮಣ್ಯ ದೇವಸ್ಥಾನದಲ್ಲಿ ಆ.27ರಿಂದ 29ರ ವರೆಗೆ 22ನೇ ವರ್ಷದ ಶ್ರೀ ಗಣೇಶೋತ್ಸವ ಭಕ್ತಿ ಭಾವಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಜರಗಲಿದೆ.
➡️ ಆ.27ರಂದು ತೆನೆ ಕಟ್ಟುವುದು, ಶ್ರೀ ಗಣಪತಿ ಮೂರ್ತಿ ಪ್ರತಿಷ್ಠಾಪನೆ, ಗಣಹೋಮ ಹಾಗೂ ಚಾಮುಂಡೇಶ್ವರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
➡️ ಆ.28ರಂದು ವಿನಾಯಕ ಭಜನಾ ಮಂಡಳಿಯವರಿಂದ ಭಜನಾ ಸೇವೆ ಜರುಗಲಿದೆ.
➡️ ಆ.29ರಂದು ಸಂಜೆ ಶ್ರೀ ವಿನಾಯಕ ಭಜನಾ ಮಂಡಳಿ ರಾಮನಗರ ಹಾಗೂ ಅತಿಥಿ ಕಲಾವಿದರಿಂದ ತಾಳಮದ್ದಳೆ ಶಿವಭಕ್ತ ವೀರಮಣಿ ಪ್ರದರ್ಶನ, ನಂತರ ಶ್ರೀ ಶಾಸ್ತ್ರೇಶ್ವರ ಭಜನಾ ಮಂಡಳಿ ಹಾರ್ಪಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 9 ಗಂಟೆಗೆ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ ಸಲ್ಲಿಸಿ, ಬಳಿಕ ಭಕ್ತರ ಸಂಭ್ರಮದ ನಡುವೆ ಶ್ರೀದೇವರ ವಿಸರ್ಜನೆ ನೆರವೇರಲಿದೆ.
✨ ಭಕ್ತಿಪೂರ್ಣ ವಾತಾವರಣದಲ್ಲಿ ನಡೆಯಲಿರುವ ಈ ಗಣೇಶೋತ್ಸವಕ್ಕೆ ಸಕಲ ಭಕ್ತಾಧಿಗಳನ್ನು ಆತ್ಮೀಯವಾಗಿ ಆಹ್ವಾನಿಸಲಾಗಿದೆ. ✨
إرسال تعليق