ಧರ್ಮಸ್ಥಳ ಪೊಲೀಸ್ ಠಾಣೆಯ 3 ಪ್ರಮುಖ ಪ್ರಕರಣಗಳು ಎಸ್‌.ಐ.ಟಿ‌ಗೆ ವರ್ಗಾವಣೆ: 2 ಅಸ್ಥಿಪಂಜರ ಅವಶೇಷ ಮತ್ತು 1 ದೂರರ್ಜಿಯ ತನಿಖೆ ಮುಂದುವರಿಕೆ.

ಧರ್ಮಸ್ಥಳ, ಆ.6: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅ.ಕ್ರ: 39/2025, ಭಾರತೀಯ ದಂಡ ಸಂಹಿತೆ (BNS) ಕಲಂ 211 (ಎ) ಯಡದ ಪ್ರಕರಣವನ್ನು ದಿನಾಂಕ: 19.07.2025 ರಂದು ವಿಶೇಷ ತನಿಖಾ ತಂಡ (SIT)ಕ್ಕೆ ಅಧಿಕೃತವಾಗಿ ವರ್ಗಾಯಿಸಲಾಗಿದೆ.

ಈ ಪ್ರಕರಣವಿಲ್ಲದೆ, ವಿಶೇಷ ತನಿಖಾ ತಂಡ ಈಗಾಗಲೇ ಇನ್ನು ಮೂರು ಪ್ರತ್ಯೇಕ ಪ್ರಕರಣಗಳ ತನಿಖೆ ನಡೆಸುತ್ತಿದೆ. ಅವುಗಳಲ್ಲಿ ಎರಡು ಅಸ್ವಾಭಾವಿಕ ಮರಣ ಪ್ರಕರಣಗಳು (ಯು.ಡಿ.ಆರ್) ಹಾಗೂ ಒಂದು ದೂರರ್ಜಿಯೂ ಸೇರಿವೆ.

ಅಸ್ಥಿಪಂಜರ ಪ್ರಕರಣಗಳು:

A. 31.07.2025: ಎಸ್‌.ಐ.ಟಿ ತಂಡವು ಧರ್ಮಸ್ಥಳದ ಒಡೆತನದಲ್ಲಿರುವ ಜಾಗದಲ್ಲಿ ಉತ್ಖನನ ನಡೆಸುತ್ತಿದ್ದ ಸಂದರ್ಭದಲ್ಲಿ, ಮಣ್ಣಿನಲ್ಲಿ ಪತ್ತೆಯಾದ ಅಸ್ಥಿಪಂಜರದ ಅವಶೇಷಗಳ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ: 35/2025 ರಂದು ಪ್ರಕರಣ ದಾಖಲಾಯಿತು.

B. 04.08.2025: ಉತ್ಖನನಕ್ಕೆ ನಿಗದಿಪಡಿಸಲಾಗಿದ್ದ ಸ್ಥಳಗಳ ಹೊರತಾಗಿ, ಮತ್ತೊಂದು ಬೇರೆಯಾದ ಸ್ಥಳದಲ್ಲಿ ಮಣ್ಣಿನ ಮೇಲೆಯೇ ಕಂಡುಬಂದ ಅಸ್ಥಿಪಂಜರದ ಅವಶೇಷಗಳ ಕುರಿತು, 05.08.2025 ರಂದು ಯು.ಡಿ.ಆರ್ ಸಂಖ್ಯೆ: 36/2025 ಎಂಬ ಹೊಸ ಪ್ರಕರಣ ದಾಖಲಾಗಿದ್ದು, ಇದರ ತನಿಖೆಯನ್ನೂ ಎಸ್‌.ಐ.ಟಿ ಮಾಡಲಿದೆ.

ಮಹತ್ವದ ದೂರರ್ಜಿಯ ದಾಖಲೆ:

C. 04.08.2025: ಜಯಂತ್ ಎಂಬ ವ್ಯಕ್ತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಲಾದ ದೂರಿಗೆ ಸಂಬಂಧಿಸಿದಂತೆ, ದೂರು ಸಂಖ್ಯೆ: 200/DPS/2025 ಎಂದು ದಾಖಲಾಗಿದ್ದು, ಈ ದೂರು ಕೂಡ ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲಾಗಿದೆ.

ವಿಶೇಷ ತನಿಖಾ ತಂಡಕ್ಕೆ ಅಧಿಕೃತ ಅನುಮೋದನೆ:

ಈ ಮೂರು ಪ್ರತ್ಯೇಕ ಪ್ರಕರಣಗಳ ತನಿಖೆಯನ್ನು ನಡೆಸಲು ಮಾನ್ಯ ಡಿಜಿ ಮತ್ತು ಐಜಿಪಿಯವರು ವಿಶೇಷ ತನಿಖಾ ತಂಡ (SIT)ಗೆ ಅಧಿಕೃತ ಅನುಮೋದನೆ ನೀಡಿದ್ದು, ಇದೀಗ ಎಲ್ಲಾ ಪ್ರಕರಣಗಳ ಹಿನ್ನಲೆ ತಿಳಿದುಬರುವ ನಿರೀಕ್ಷೆಯಿದೆ. ಗ್ರಾಮಸ್ಥರಲ್ಲಿ ಉತ್ಕಂಠೆ ಮತ್ತು ಆತಂಕ ಉಂಟಾಗಿರುವ ಈ ಪ್ರಕರಣಗಳಲ್ಲಿ ಶೀಘ್ರ ಸುಳಿವು ಲಭಿಸುವ ನಿರೀಕ್ಷೆ ವ್ಯಕ್ತವಾಗುತ್ತಿದೆ.

Post a Comment

أحدث أقدم