ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಕಲ್ಯಾಣೋತ್ಸವ–ಸಾಮೂಹಿಕ ವಿವಾಹ ಪೂರ್ವಭಾವಿ ಸಭೆ ಆಗಸ್ಟ್ 31.

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ವತಿಯಿಂದ ನಡೆಯಲಿರುವ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಮಾಂಗಲ್ಯಂ ತಂತುನಾಸಿನ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಸಭೆ ಆಗಸ್ಟ್ 31 ರಂದು ಸಂಜೆ 4 ಗಂಟೆಗೆ ಪುತ್ತೂರು ನಗರದ ಸುಭದ್ರಾ ಕಲಾ ಮಂದಿರ, ಮುಕ್ರಂಪಾಡಿಯಲ್ಲಿ ಜರುಗಲಿದೆ.

ಪ್ರತಿವರ್ಷವೂ ಪುತ್ತೂರು ಮಹಾಲಿಂಗೇಶ್ವರನ ಪವಿತ್ರ ನಾಡಿನಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಈ ಧಾರ್ಮಿಕ ಹಾಗೂ ಸಾಮಾಜಿಕ ಮಹೋತ್ಸವವು ಈ ಬಾರಿಯೂ ಭವ್ಯವಾಗಿ ನಡೆಯಲು ಸಿದ್ಧತೆಗಳು ಆರಂಭಗೊಂಡಿವೆ.

ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ, ಆಯೋಜನಾ ಜವಾಬ್ದಾರಿ, ಸ್ವಯಂಸೇವಕರ ಹಂಚಿಕೆ, ಧಾರ್ಮಿಕ ವಿಧಿ ವಿಧಾನಗಳ ಸಿದ್ಧತೆ ಸೇರಿದಂತೆ ವಿವಿಧ ವಿಚಾರಗಳನ್ನು ಚರ್ಚಿಸಲಾಗುವುದು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಸಮಾಜಮುಖಿ ಸೇವಾ ಚಟುವಟಿಕೆಗಳ ಅಂಗವಾಗಿ ನಡೆಯುವ ಈ ಕಲ್ಯಾಣೋತ್ಸವವು ಹಲವಾರು ಬಡ ಹಾಗೂ ಸಾಮಾನ್ಯ ವರ್ಗದ ಕುಟುಂಬಗಳಿಗೆ ಮದುವೆ ಖರ್ಚಿನ ಭಾರವನ್ನು ಕಡಿಮೆ ಮಾಡುವುದರೊಂದಿಗೆ ಸಾಮಾಜಿಕ ಸೌಹಾರ್ದತೆಯನ್ನು ಉತ್ತೇಜಿಸುವುದಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಗೆ ಸಮಸ್ತ ಹಿಂದು ಬಂಧುಗಳನ್ನು ಆಹ್ವಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್ ವತಿಯಿಂದ ಕೋರಲಾಗಿದೆ.

Post a Comment

أحدث أقدم