ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಭವನದಲ್ಲಿ ಆಗಸ್ಟ್ 24ರಿಂದ 29ರವರೆಗೆ ನಡೆಯುತ್ತಿರುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಾಕಿದ್ದ ಶುಭಕೋರಿದ ಬ್ಯಾನರ್ ಹರಿದು ಹಾಕಿದ ಘಟನೆ ನಡೆದಿದೆ.
ಪಿರ್ಯಾದುದಾರರಾದ ಫರಂಗಿಪೇಟೆ ನಿವಾಸಿ ಚಂದ್ರಶೇಖರ್ ಆಳ್ವ (55) ಅವರು ಅಗತ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆದು, ಆಗಸ್ಟ್ 25ರಂದು ಸುಮಾರು ರೂ.3,500/- ವೆಚ್ಚದಲ್ಲಿ ಕುಂಪಣ ಮಜಲು ಕ್ರಾಸ್ ಬಳಿ ಬ್ಯಾನರ್ ಅಳವಡಿಸಿದ್ದರು. ಆದರೆ ಆಗಸ್ಟ್ 27ರ ರಾತ್ರಿ, ಸ್ಥಳೀಯ ನಿವಾಸಿ ಹೈದರ್ ಎಂಬಾತನು ಸದ್ರಿ ಬ್ಯಾನರ್ ಹರಿದು ಹಾಕಿದ ಆರೋಪ ಕೇಳಿಬಂದಿದೆ.
ಈ ಕೃತ್ಯದಿಂದಾಗಿ ಸುಮಾರು ರೂ.3,500/- ನಷ್ಟವಾಗಿರುವುದಲ್ಲದೇ, ಧಾರ್ಮಿಕ ಭಾವನೆಗೆ ಧಕ್ಕೆ ತಂದು ಸಾರ್ವಜನಿಕರಲ್ಲಿ ಪ್ರಚೋದನೆ ಉಂಟಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರು ಆಧರಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.129/2025 ರಂತೆ, BNS 2023ರ ಕಲಂ 299, 192, 353 (1)(b), 57, 324(4) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಹೈದರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Post a Comment