ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ.

ಬೆಳ್ತಂಗಡಿ:ಬೆಳ್ತಂಗಡಿ ಉಜಿರೆಯಲ್ಲಿ 2014ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದ ವಿವರ:
2014ರ ಮಾರ್ಚ್ 1ರಂದು ಉಜಿರೆಯಲ್ಲಿರುವ ವಸತಿಗೃಹದಲ್ಲಿ ನಡೆದ ಕೊಲೆ ಪ್ರಕರಣವನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 126/2014, IPC ಸೆಕ್ಷನ್ 302, 201ರಡಿಯಲ್ಲಿ ದಾಖಲಿಸಲಾಗಿತ್ತು. ಆರೋಪಿಯಾಗಿದ್ದ ಚಿಕ್ಕಮಗಳೂರು ಮೂಲದ ಬಾಳಪ್ಪ ಎಂ. ಕಳ್ಳೊಳ್ಳಿ ಎಂಬಾತನನ್ನು ಬಂಧಿಸಿ, ತನಿಖೆ ನಡೆಸಿ, ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕ ಲಿಂಗಪ್ಪ ಪೂಜಾರಿ ರವರು ದೋಷಾರೋಪಣಾ ಪಟ್ಟಿಯನ್ನು ಮಾನ್ಯ CJ&JMFC ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಹೆಚ್ಚುವರಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ (SC/ST Act) ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ಆಗಿನ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ರಾಹುಲ್ ಕುಮಾರ್ ಶಹಪುರ್ (IPS) ರವರು ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು:
ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಜಗದೀಶ್ ರವರು 28-08-2025ರಂದು ತೀರ್ಪು ಪ್ರಕಟಿಸಿ, ಆರೋಪಿ ಬಾಳಪ್ಪ ಎಂ. ಕಳ್ಳೊಳ್ಳಿಗೆ

IPC ಸೆಕ್ಷನ್ 302 ರಡಿಯಲ್ಲಿ: ಜೀವಾವಧಿ ಶಿಕ್ಷೆ + ರೂ.15,000 ದಂಡ (ಪಾವತಿಸದಿದ್ದರೆ 6 ತಿಂಗಳು ಹೆಚ್ಚುವರಿ ಜೈಲು)

IPC ಸೆಕ್ಷನ್ 201 ರಡಿಯಲ್ಲಿ: 2 ವರ್ಷಗಳ ಸರಳ ಜೈಲು + ರೂ.5,000 ದಂಡ (ಪಾವತಿಸದಿದ್ದರೆ 3 ತಿಂಗಳು ಹೆಚ್ಚುವರಿ ಜೈಲು)


ವಿಧಿಸಲು ಆದೇಶಿಸಿದ್ದಾರೆ.

ಸರ್ಕಾರಿ ವಾದ ಮಂಡನೆ:
ಸರ್ಕಾರಿ ಅಭಿಯೋಜಕರಾಗಿ ಜ್ಯೋತಿ ಪಿ. ನಾಯಕ್ ವಾದ ಮಂಡಿಸಿದ್ದು, ಪ್ರಕರಣದ ತನಿಖಾ ಸಹಾಯಕರಾಗಿ ಎಎಸ್‌ಐ ಕಲೈಮಾರ್ ಹಾಗೂ ನ್ಯಾಯಾಲಯ ಸಿಬ್ಬಂದಿಯಾಗಿ ಮಲ್ಲಿಕಾರ್ಜುನ್ (PC2293) ಕರ್ತವ್ಯ ನಿರ್ವಹಿಸಿದ್ದಾರೆ.

Post a Comment

Previous Post Next Post