ಧರ್ಮ ಸೌಹಾರ್ದತೆಗೆ ಧಕ್ಕೆಯಾಗುವ ಸಂದೇಶ: ವಾಟ್ಸಪ್ ಸ್ಟೇಟಸ್‌ನ ಆಧಾರದಲ್ಲಿ ವ್ಯಕ್ತಿ ವಿರುದ್ಧ ಕೇಸ್.

ಬೆಳ್ತಂಗಡಿ, ಆಗಸ್ಟ್ 1, 2025:ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಕೋಮು ಭಾವನೆಗೆ ಧಕ್ಕೆಯಾಗುವಂತಹ ಸಂದೇಶವನ್ನು ಹಂಚಿದ ಆರೋಪದ ಮೇಲೆ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿ ರಕ್ಷಿತ್ ಶೆಟ್ಟಿ ಎಂಬಾತನು ತನ್ನ ವಾಟ್ಸಪ್‌ ಸ್ಟೇಟಸ್‌ನಲ್ಲಿ ಧರ್ಮಗಳ ನಡುವೆ ವೈಮನಸ್ಯ ಉಂಟುಮಾಡುವ ಹಾಗೂ ಸಾರ್ವಜನಿಕರಲ್ಲಿ ಭೀತಿಯನ್ನು ಹುಟ್ಟಿಸಬಹುದಾದ ಸಂದೇಶವನ್ನು ಅಪ್ಲೋಡ್ ಮಾಡಿದ ಬಗ್ಗೆ ಮಾಹಿತಿ 31 ಜುಲೈ 2025 ರಂದು ದೊರೆತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 69/2025 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಭಾರತ ನ್ಯಾಯ ಸಂಹಿತೆ 2023ರ ಕಲಂ 353(1)(ಬಿ) ಮತ್ತು 353(2) ಅನ್ವಯ ಕಾನೂನು ಕ್ರಮ ಜಾರಿಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜವಾಬ್ದಾರಿಯುತ ನಡೆಯಬೇಕೆಂಬ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದು, ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಯಾವುದೇ ಕ್ರಿಯೆ ಅಥವಾ ಪ್ರಕಟಣೆ ತೀವ್ರ ಕಾನೂನು ಕ್ರಮಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ಮತ್ತು, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಭಾವನೆಗೆ ದಕ್ಕೆಯಾಗುವಂತಹ ವಿಷಯವನ್ನು ಹಂಚುವ ಮುನ್ನ, ಅದರ ಪರಿಣಾಮಗಳ ಬಗ್ಗೆ ಯೋಚಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬ ಸಂದೇಶವನ್ನು ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ.

Post a Comment

أحدث أقدم