ಕುಕ್ಕೆ ಸುಬ್ರಹ್ಮಣ್ಯ: ಪುತ್ತೂರು ಪುರಸಭೆ ಆಯುಕ್ತೆಯಾದ ಶ್ರೀಮತಿ ವಿದ್ಯಾ ಭಟ್ ಅವರು ಪತಿ ಯು.ವಿ. ಭಟ್ ಹಾಗೂ ಮಗಳೊಂದಿಗೆ ಮಂಗಳವಾರ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಕುಟುಂಬ ಸಮೇತರಾಗಿ ದೇವರ ಸನ್ನಿಧಿಗೆ ಆಗಮಿಸಿದ ಆಯುಕ್ತೆಯವರಿಗೆ ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು. ಶ್ರೀಕ್ಷೇತ್ರದ ಪಾವನ ವಾತಾವರಣದಲ್ಲಿ ಕುಟುಂಬವು ಭಕ್ತಿಯಿಂದ ದೇವರ ಅನುಗ್ರಹವನ್ನು ಕೋರಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರು ಆಯುಕ್ತೆಯವರಿಗೆ ಶಾಲು ಹೊದಿಸಿ ಗೌರವ ಸಲ್ಲಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನದೊಂದಿಗೆ ಭಕ್ತಿಪರ ವಾತಾವರಣದಲ್ಲಿ ಈ ಭೇಟಿ ವಿಶೇಷತೆ ಪಡೆದುಕೊಂಡಿತು.
إرسال تعليق