ನೆಲ್ಯಾಡಿ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಬೆಳ್ಳಿ ಹಬ್ಬ ಮತ್ತು ಸ್ವಾತಂತ್ರ ದಿನಾಚರಣೆ.

ನೆಲ್ಯಾಡಿ ಆಟೋರಿಕ್ಷಾ ಚಾಲಕ ಮಾಲಕ ಸಂಘದ ನೇತೃತ್ವದಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು . ಈ ಸಂದರ್ಭದಲ್ಲಿ ಸಂಘದ ಬೆಳ್ಳಿ ಹಬ್ಬವನ್ನು ಕೂಡ ಆಚರಿಸಲಾಯಿತು . 

ಆಟೋರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿ ರವಿ ಪ್ರಸಾದ್ ಗುತ್ತಿನ ಮನೆ ಸಭಾಧ್ಯಕ್ಷತೆ ವಹಿಸಿದ್ದರು,ನೆಲ್ಯಾಡಿ ಹೊರಠಾಣೆಯ ಠಾಣಾಧಿಕಾರಿ ಪ್ರವೀಣ್ ಕೆ.ಎಲ್ ಧ್ವಜಾರೋಹಣ ನಡೆಸಿದರು ಶುಭ ಹಾರೈಸಿದರು,ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಾಜಾಲು ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಗೌಡ,ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್, ವಕೀಲರಾದ ಇಸ್ಮಾಯಿಲ್ ಎನ್, ವರ್ತಕರ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್, ಧರ್ಮ ಗುರುಗಳಾದ ರೆ. ಫಾ. ಶಾಜಿ ಮ್ಯಾಥ್ಯು,ಹೊಸಮಜಲು ಜಲಾಲಿಯ ಮಸೀದಿ ಕಾರ್ಯದರ್ಶಿ ಎಂ.ಕೆ ಇಬ್ರಾಹಿಂ,ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ರಂಗಸ್ವಾಮಿ ಮಾತನಾಡಿ ಶುಭ ಹಾರೈಸಿದರು,

 ರವಿಪ್ರಸಾದ್ ಗುತ್ತಿನ ಮನೆ ಸ್ವಾಗತಿಸಿ, ನಿರೂಪಿಸಿದರು ಸಂಘದ ಕಾರ್ಯದರ್ಶಿ ತೀರ್ಥೇಶ್ವರ ಉರ್ಮನ್ ಧನ್ಯವಾದ ಸಮರ್ಪಿಸಿದರು, ಸಮಾರಂಭದಲ್ಲಿ ಭಾರತೀಯ ಸೇನಾ ಪಡೆಯ ಯೋಧ ಮ್ಯಾಥ್ಯುರವರನ್ನು ಸನ್ಮಾನಿಸಲಾಯಿತು. ಚಾಲಕ ಮಾಲಕ ಸಂಘದ ಸದಸ್ಯರು ಶಿಸ್ತಿನಿಂದ ಪಾಲ್ಗೊಂಡರು.

Post a Comment

أحدث أقدم