ಸುಬ್ರಹ್ಮಣ್ಯ, ಆಗಸ್ಟ್ 1: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದೀರ್ಘಕಾಲದ ಸೇವೆಯನ್ನು ನೀಡಿದ ಮೂವರು ನೌಕರರಿಗೆ ಭಾವಪೂರ್ಣವಾಗಿ ಬೀಳ್ಕೊಟ್ಟು, ದೇವಳದ ಆಡಳಿತ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಜುಲೈ 31 ರಂದು ನಿವೃತ್ತಿ ಹೊಂದಿದ ಶ್ರೀ ಪದ್ಮನಾಭ ಶೆಟ್ಟಿಗಾರ್ (ಕಚೇರಿ ಮುಖ್ಯಸ್ಥ), ಶ್ರೀ ರಮೇಶ್ ಭಟ್ (ದಿನಸಿ ವಿಭಾಗದ ಗುಮಾಸ್ತ) ಮತ್ತು ಶ್ರೀಮತಿ ರತಿ ಶೆಟ್ಟಿ (ಡೈನಿಂಗ್ ಹಾಲಿನ ಸ್ವಚ್ಛತಾ ಸಿಬ್ಬಂದಿ) ಅವರಿಗೆ ದೇವಸ್ಥಾನದ ವತಿಯಿಂದ ವಿಭಿನ್ನ ಶೈಲಿಯಲ್ಲಿ ಗೌರವ ಸಲ್ಲಿಸಲಾಯಿತು.
ವಿಶೇಷವಾಗಿ, ಶ್ರೀ ಪದ್ಮನಾಭ ಶೆಟ್ಟಿಗಾರ್ ಅವರು 39 ವರ್ಷಗಳ ಕಾಲ ಆಡಳಿತ ಕಚೇರಿಯಲ್ಲಿ ನೇತೃತ್ವದ ಕಾರ್ಯ ನಿರ್ವಹಿಸಿ ದೇವಳದ ನಿರ್ವಹಣೆಗೆ ಮಹತ್ವದ ಕೊಡುಗೆ ನೀಡಿದ್ದು, ಅವರ ಸೇವೆಯನ್ನು ಎಲ್ಲರೂ ಕೊಂಡಾಡಿದರು. ಇದೇ ರೀತಿಯಾಗಿ ಶ್ರೀ ರಮೇಶ್ ಭಟ್ ಅವರು ದಿನಸಿ ವಿಭಾಗದಲ್ಲಿ ಶಿಸ್ತುಬದ್ಧ ಸೇವೆ ನೀಡಿದ್ದರೆ, ಶ್ರೀಮತಿ ರತಿ ಶೆಟ್ಟಿ ಅವರು ನಿರಂತರ ಶ್ರಮದ ಮೂಲಕ ದೇವಳದ ಶುದ್ಧತೆಯ ರಕ್ಷಣೆಗೆ ಪಾಲುಗಾರರಾಗಿದ್ದರು.
ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ, ವ್ಯವಸ್ಥಾಪನ ಸಮಿತಿಯ ಸದಸ್ಯರುಗಳು ಶ್ರೀಮತಿ ಲೀಲಾ ಮನಮೋಹನ,ಶ್ರೀಮತಿ ಪ್ರವೀಣ ಮರುವಂಜ ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಉಪಸ್ಥಿತರಿದ್ದು, ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದೇವಳದ ಹಲವಾರು ನೌಕರರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
إرسال تعليق