ಕುಕ್ಕೆ ಸುಬ್ರಹ್ಮಣ್ಯ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಧ್ವನಿವರ್ಧಕ ತಡೆ – ಮಕ್ಕಳ ಅಸಮಾಧಾನ; “ಧ್ವನಿವರ್ಧಕ ಒದಗಿಸಿ” ಎಂದು ಮಕ್ಕಳ ವೃಂದದ ಮನವಿ.

ಕುಕ್ಕೆ ಸುಬ್ರಹ್ಮಣ್ಯ:ಕುಕ್ಕೆ ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿ ಎರಡನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಮಕ್ಕಳು ಹಾಗೂ ಆಯೋಜಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




ಮಕ್ಕಳ ವೃಂದದ ಪ್ರಕಾರ – "ಈ ವಿಶೇಷ ಕಾರ್ಯಕ್ರಮಕ್ಕಾಗಿ ನಾವು ಕಳೆದ ಮೂರು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದೇವೆ. ಸೌಂಡ್ ಸೆಟ್ ಬುಕ್ಕಿಂಗ್ ಕೂಡಾ ಎರಡು ತಿಂಗಳ ಮುಂಚಿತವಾಗಿ ಮಾಡಿದ್ದೇವೆ. ನಾಳೆ ಆಗಸ್ಟ್ 22 ರಂದು (ಅಷ್ಟಮಿ) ವಿವಿಧ ಸ್ಪರ್ಧೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಿದ್ದೇವೆ. ಆದರೆ ಇದೀಗ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಕಠಿಣ ಆದೇಶದ ಹಿನ್ನೆಲೆಯಲ್ಲಿ ಧ್ವನಿವರ್ಧಕ ( ಸೌಂಡ್ಸೆಟ್) ಬಳಸಲು ಅವಕಾಶ ನೀಡಲಾಗುತ್ತಿಲ್ಲ. ಇದರಿಂದ ನಮ್ಮ ಪರಿಶ್ರಮ ವ್ಯರ್ಥವಾಗುವ ಸಾಧ್ಯತೆ ಇದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ದಕ್ಷಿಣ ಕನ್ನಡ ಧ್ವನಿವರ್ಧಕ ಸಂಘ ಕೂಡ ಪ್ರತಿಕ್ರಿಯೆ ನೀಡಿದ್ದು – "ನಾವು ಯಾವುದೇ ಸರಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಧ್ವನಿವರ್ಧಕಗಳನ್ನು ಒದಗಿಸುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಡಿಜೆ ಹಾಗೂ ಧ್ವನಿವರ್ಧಕಗಳ ವಿರುದ್ಧದ ಕಟ್ಟುನಿಟ್ಟಿನ ಕ್ರಮ ತೆರವು ಮಾಡದಿದ್ದರೆ ನಮ್ಮ ಬದುಕು ಕಷ್ಟವಾಗುತ್ತದೆ" ಎಂದು ಪ್ರತಿಭಟಿಸಿದ್ದಾರೆ.

ಮಕ್ಕಳ ವೃಂದ ಮಾಧ್ಯಮದ ಮುಂದೆ ಮನವಿ ಮಾಡಿಕೊಂಡು – "ನಮ್ಮ ಪರಿಶ್ರಮ ವ್ಯರ್ಥವಾಗದಂತೆ ಸರಕಾರ ಹಾಗೂ ಅಧಿಕಾರಿಗಳು ಧ್ವನಿವರ್ಧಕ ಬಳಕೆಗಾಗಿ ಅವಕಾಶ ನೀಡಬೇಕು. ಇಲ್ಲವಾದರೆ ನಮ್ಮ ಈ ವಿಶೇಷ ಜನ್ಮಾಷ್ಟಮಿ ಆಚರಣೆ ನಿರ್ಜೀವವಾಗುತ್ತದೆ" ಎಂದು ಮನವಿ ಮಾಡಿದ್ದಾರೆ.

👉 ಈ ಕುರಿತು ಸರಕಾರ ಹಾಗೂ ಪೊಲೀಸ್ ಇಲಾಖೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದರ ಕಡೆಗೆ ಸ್ಥಳೀಯರ ಗಮನ ನೆಟ್ಟಿದೆ.

Post a Comment

أحدث أقدم