ಸುಬ್ರಹ್ಮಣ್ಯ ಆಗಸ್ಟ್ 9 : ತಸ್ವಿ ಹಸಿರು ದಿಬ್ಬಣ ಸಂಸ್ಥೆ ರಾಮಕುಂಜ ಅವರು ಕುಕ್ಕೆ ಶ್ರೀಸುಬ್ರಹ್ಮಣ್ಯ ಕಾಲೇಜಿನಲ್ಲಿ ಶನಿವಾರ ಪರಿಸರ ದ ಬಗ್ಗೆ ಇರುವ ಕಿರುಚಿತ್ರ ಹರಿದ್ವರ್ಣ ವನ್ನ ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಪ್ರಾಯೋಜಕರಾದ ರವಿಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆ ಪದವು ಅವರು ತುಳಸಿ ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯದ ನಿವೃತ್ತ ಉಪನ್ಯಾಸಕ ರೋ.ವಿಶ್ವನಾಥ ನಡುತೋಟ ಮಾತನಾಡಿ ಕೆಎಸ್ಎಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಕೇಶವ ರಾಮ ಕುಂಜ ಅವರು ವಿದ್ಯಾರ್ಥಿ ದೆಸೆಯಿಂದಲೇ ಕ್ರಿಯಾಶೀಲರಾಗಿದ್ದು ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು .
ತದನಂತರ ಮಂಗಳೂರಿನಲ್ಲಿ ಸಂಸ್ಥೆಯೊಂದರಲ್ಲಿ ನಿರಂತರವಾಗಿ ದುಡಿಯುತ್ತಾ ರಾಮ ಕುಂಜದಲ್ಲಿ ಕಸ್ವಿ ಹಸಿರಿ ದಿಬ್ಬಣ ಸಂಸ್ಥೆಯನ್ನು ಪ್ರಾರಂಭಿಸಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದರೊಂದಿಗೆ ಸಂದೇಶವನ್ನು ನೀಡುತ್ತಾ ಇರೋದು ಸಂತಸ "ಎಂದು ನುಡಿದರು. ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ ವಹಿಸಿದ್ದರು. ಕಸ್ವಿ ಹಸಿರು ದಿಬ್ಬಣ ಸಂಸ್ಥೆಯ ಅಧ್ಯಕ್ಷ ಶ್ರದ್ದಾ ಕೇಶವ ರಾಮ ಕುಂಜ ಮಾಹಿತಿ ನೀಡಿದರು. ಕಾಲೇಜು ಉಪನ್ಯಾಸಕಿ ಹಾಗೂ ಸ್ಕೌಟ್ ಅಂಡ್ ಗೈಡ್ಸ್ ಸಂಯೋಜಕೀ ಪ್ರಮೀಳಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸ್ಕೌಟ್ ಅಂಡ್ ಗೈಡ್ಸ್ ನ ವಿದ್ಯಾರ್ಥಿಗಳು ಉಪನ್ಯಾಸಕರು ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ಕೇಶವ ರಾಮ ಕುಂಜ ದಂಪತಿಯವರನ್ನು ಡಾ. ರವಿ ಕಕ್ಕೆಪದವ್ ಅವರು ಶಾಲು ಹೊಂದಿಸಿ ಸ್ಮರಣಕ್ಕೆ ನೀಡಿ ಗೌರವಿಸಿದರು.
إرسال تعليق