ಕುಕ್ಕೆ: ಶ್ರೀ ದೇವರ ಪಾಲಕಿಗೆ ರಜತ ಗೊಂಡೆ ಸಮರ್ಪಣೆ.

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಪಾಲಕಿಗೆ ರಜತ ಗೊಂಡೆಯನ್ನು ಸೇವಾರೂಪದಲ್ಲಿ ಉದ್ಯಮಿ ನಾಗರಾಜ ಕುಲಕರ್ಣಿ (ಬೆಂಗಳೂರು) ಮತ್ತು ಕುಟುಂಬಸ್ಥರು ಶುಕ್ರವಾರ ಸಮರ್ಪಿಸಿದರು.

ಹಿಂದಿನ ಸಂದರ್ಭದಲ್ಲೂ ಬೆಳ್ಳಿಯ ಪಾಲಕಿಯನ್ನು ದೇವಳಕ್ಕೆ ಸಮರ್ಪಣೆ ಮಾಡಿದ ಇವರು, ಈ ಬಾರಿ ನೂತನ ಪಲ್ಲಕ್ಕಿಗೆ 12 ಬೆಳ್ಳಿಯ ಗೊಂಡೆಗಳು ಸಮರ್ಪಿಸಿ ಭಕ್ತಿಭಾವ ಪ್ರದರ್ಶಿಸಿದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು, ದಾನಿಗಳ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಶಿಷ್ಟಚಾರ ಅಧಿಕಾರಿ ಜಯರಾಮ್ ರಾವ್, ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರು ಭಕ್ತಿಭಾವದಿಂದ ಸೇವಾ ಸಮರ್ಪಣೆ ಮಾಡುವ ಸಾಂಪ್ರದಾಯಿಕ ಪರಂಪರೆಯ ಇನ್ನೊಂದು ನಿದರ್ಶನವಾಗಿ ಈ ಕಾರ್ಯಕ್ರಮ ಕಂಗೊಳಿಸಿತು.

Post a Comment

Previous Post Next Post