ನೆಲ್ಯಾಡಿ ಶಬರೀಶ ಕಲಾಮಂದಿರದಲ್ಲಿ ಕಾಮಧೇನು ವರಲಕ್ಷ್ಮಿ ಸೇವಾ ಸಮಿತಿಯ ನೇತೃತ್ವದಲ್ಲಿ ವರಲಕ್ಷ್ಮಿ ಪೂಜೆ.

ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಬರೀಶ ಕಲಾ ಕೇಂದ್ರ ದಲ್ಲಿ ನೆಲ್ಯಾಡಿ ಕಾಮಧೇನು ಸಹಕಾರಿ ಸಂಘದ ವತಿಯಿಂದ ಕಾಮಧೇನು ಮಹಿಳಾ ವರಲಕ್ಷ್ಮಿ ಸೇವಾ ಸಮಿತಿಯ ನೇತೃತ್ವದಲ್ಲಿ ಪ್ರಥಮ ವರ್ಷದ ವರಲಕ್ಷ್ಮಿ ಪೂಜೆ ನಡೆಯಿತು.ಪುರೋಹಿತರಾದ ಮಾಧವ ಸರಳಾಯರ ನೇತೃತ್ವ ದಲ್ಲಿ ಅಮೃತ್ ಸರಳಾಯ ಮತ್ತು ಮುರಳಿ ಭಟ್ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.

   ನಂತರ. ನಡೆದ ಸಭಾಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಹರೀಶ್ ಇಂಜಾಡಿಯವರನ್ನು ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೀಶ್ ಇಂಜಾಡಿ ಪ್ರತಿಷ್ಠಿತ ಕ್ಷೇತ್ರ ಸುಬ್ರಮಣ್ಯದ ಆಡಳಿತ ಸಮಿತಿ ಅಧ್ಯಕ್ಷನಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ತುಂಬಾ ಖುಷಿ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಬಲ ತುಂಬುವ ವರಮಹಾಲಕ್ಷ್ಮಿಯ ಆರಾಧನೇಯ ಇಂತಹ ಧಾರ್ಮಿಕ ಕಾರ್ಯಕ್ರಮ ಗಳ ಮೂಲಕ ಮುಂದಿನ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ದೊರೆಯಲು ಸಾಧ್ಯ ಈ ನೆಲೆಯಲ್ಲಿ ಕಾಮಧೇನು ವರಲಕ್ಷ್ಮಿ ಪೂಜಾ ಸಮಿತಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ, ಸಾಮರಸ್ಯದ ಬದುಕು ನಮ್ಮದಾಗಬೇಕಾದರೆ ನಾವೆಲ್ಲ ಇಂತಹ ಕಾರ್ಯಕ್ರಮಗಳ ಮೂಲಕ ಒಂದಾಗಬೇಕು ಎಂದರು.
  ಕಡಬ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿಯವರು ಮಾತನಾಡಿ ಪ್ರಬುದ್ಧ ರಾಜಕಾರಣಿಯಾಗಿ ಬೆಳೆಯುತ್ತಿರುವ, ಪ್ರಸ್ತುತ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾಗಿ, ದ. ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಶ್ರೀಮತಿ ಉಷಾ ಅಂಚನ್ರವರ ನೇತೃತ್ವ ದಲ್ಲಿ ನಡೆಯುತ್ತಿರುವ ಪ್ರಥಮ ವರ್ಷದ ವರಲಕ್ಷ್ಮಿ ಪೂಜೆ ಪ್ರತಿ ವರ್ಷ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿ ಎಂದು ಶುಭ ಹಾರೈಸಿದರು.

 ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀಮತಿ ಸೌಮ್ಯ, ಶ್ರೀಮತಿ ಪ್ರವೀಣ, ಮಾಸ್ಟರ್ ಪ್ಲಾನರಿಯ ಲೋಲಾಕ್ಷ ಕೈಕಂಬ ಮತ್ತು ಅಯ್ಯಪ್ಪ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಡಾ. ಸದಾನಂದ ಕುಂದರ್, ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಮೋಹನ್ ಕಟ್ಟೆಮಜಲು ರವರನ್ನು ಸನ್ಮಾನಿಸಲಾಯಿತು.

   ಕಾಮಧೇನು ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಅಂಚನ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸುಧೀರ್ ಕುಮಾರ್ ನಿರೂಪಿಸಿದರು ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ ತಿರ್ಲೆ, ಧರ್ಮಶ್ರೀ ಮಹಿಳಾ ಭಜನಾ ಮಂಡಳಿ ಹೊಸ ಮಜಲು ರವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು, ಕಾಮದೇನು ವರಲಕ್ಷ್ಮಿ ಸೇವಾ ಸಮಿತಿ ಪದಾಧಿಕಾರಿಗಳು ಶ್ರೀಮತಿ ಪ್ರವೀಣಿ, ದಿವ್ಯ ಪಿ,ಶ್ವೇತಾ ಕುಮಾರಿ, ರತಿ,ಚೈತನ್ಯ, ವಾರಿಜಾಕ್ಷಿ
ಮತ್ತು ಸಮಿತಿ ಸದಸ್ಯರು ಸಹಕರಿಸಿದರು.

Post a Comment

أحدث أقدم