ಪುತ್ತೂರು, ಜುಲೈ 14, 2025 – ಪುತ್ತೂರು ಕಸಬಾ ಗ್ರಾಮದ ಬೊಳುವಾರು ಎಂಬಲ್ಲಿ ವ್ಯಕ್ತಿಯೋರ್ವನು ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶನ ಮಾಡಿದ ಘಟನೆಗೆ ಸಂಬಂಧಿಸಿದಂತೆ, ಇದೀಗ ಹೊಸ ಬೆಳವಣಿಗೆಯೊಂದು ನಡೆದಿದೆ.
"ನಾವು ಭಾರತೀಯ ಸೇನೆ" ಎಂಬ ಫೇಸ್‌ಬುಕ್ ಪೇಜಿನಲ್ಲಿ, ಪ್ರಕರಣದ ಪ್ರಮುಖ ಆರೋಪಿತನಾದ ಆಶ್ರಫ್ ಬಾವು ಎಂಬಾತನು, ತನ್ನನ್ನು "ಎಸ್.ಡಿ.ಪಿ.ಐ, ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ"ನೆಂದು ಗುರುತಿಸಿಕೊಂಡು, ಘಟನೆಯ ನೈಜತೆಯನ್ನು ಪರಿಶೀಲಿಸದೇ, ಸಮಾಜದಲ್ಲಿ ಧಾರ್ಮಿಕ ವೈಮನಸ್ಸು ಹಾಗೂ ದ್ವೇಷ ಉಂಟಾಗುವ ರೀತಿಯಲ್ಲಿ ಸುಳ್ಳು ಮಾಹಿತಿ ಹರಡಿರುವುದು ಕಂಡುಬಂದಿದೆ.
ಇದನ್ನು ಗಮನಿಸಿದ ಪೊಲೀಸರು, ದಿನಾಂಕ 05.08.2025 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಅ.ಕ್ರ. 68/2025, ಭಾರತೀಯ ದಂಡ ಸಂಹಿತೆ 2023ರ ಕಲಂ 240 ಮತ್ತು 353(2) ಅಡಿಯಲ್ಲಿ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದುರುಪಯೋಗದಿಂದ ನಡೆಯುವ ಈ ರೀತಿಯ ಪೋಸ್ಟ್‌ಗಳಿಗೆ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ಧ ಕಾಪಾಡಿಕೊಳ್ಳಲು ಸಾರ್ವಜನಿಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂಬುದು ಪೊಲೀಸ್ ಇಲಾಖೆ ನೀಡಿರುವ ಸಂದೇಶವಾಗಿದೆ.
إرسال تعليق