ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಸುಬ್ರಹ್ಮಣ್ಯ ಹಾಗೂ ಆಂತರಿಕ ಗುಣಮಟ್ಟ ಭರವಸಕೋಶ (IQAC) ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 30-09-2025 ರಂದು, ಕಾಲೇಜಿನಲ್ಲಿ 41 ವರ್ಷ 11 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ ಕಚೇರಿ ಸಹಾಯಕ ಶ್ರೀ ಸುಬ್ರಹ್ಮಣ್ಯ ಎಂ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ.ಟಿ. ವಹಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಕೆ. ರಂಗಯ್ಯ ಶೆಟ್ಟಿಗಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ. ರವಿ ಕಕ್ಕೆಪದವು ಹಾಗೂ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ತುಕರಾಮ್ ಎನೆಕಲ್ ಉಪಸ್ಥಿತರಿದ್ದು, ನಿವೃತ್ತರನ್ನು ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿವೃತ್ತ ಕಚೇರಿ ಸಿಬ್ಬಂದಿ ಚಂದ್ರಾವತಿ, ರಕ್ಷಕ ಶಿಕ್ಷಕ ಸಂಘದ ಸದಸ್ಯ ಶ್ರೀ ನೀಲಪ್ಪ, ನಿವೃತ್ತರ ಧರ್ಮಪತ್ನಿ ಶ್ರೀಮತಿ ಪ್ರೇಮ ಹಾಗೂ ಪುತ್ರಿ ಚೈತ್ರ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ IQAC ಸಂಯೋಜಕಿ ಶ್ರೀಮತಿ ಲತಾ ಬಿ.ಟಿ. ಸನ್ಮಾನ ಪತ್ರ ವಾಚಿಸಿದರು.
ಶ್ರೀಮತಿ ಪ್ರಮೀಳಾ ಎನ್ ಸ್ವಾಗತಿಸಿದರು, ಶ್ರೀಮತಿ ಸುಮಿತ್ರ ಕುಮಾರಿ ನಿರೂಪಿಸಿದರು ಹಾಗೂ ಶ್ರೀಮತಿ ಕೃತಿಕಾ ವಂದಿಸಿದರು.
Post a Comment