ಸೆಪ್ಟೆಂಬರ್ 6ರಂದು ನೆಲ್ಯಾಡಿ ಬೆಥನಿ ಪಿ. ಯು. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ, ಶಿಕ್ಷಕರ ಸನ್ಮಾನ, ಮತ್ತು ಬೀಳ್ಕೊಡುಗೆ ಸಮಾರಂಭ ನಡೆಯಿತು.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರಾಧಾ ಕೃಷ್ಣರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡಲಾಯಿತು, ನಂತರ 25ವರ್ಷಗಳಿಂದ ಸಂಸ್ಥೆ ಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರಾದ *ಶ್ರೀಮತಿ ರಾಜಮ್ಮ, ಶ್ರೀಮತಿ ಪುಷ್ಪಾ ವತಿ* , ಸಹಾಯಕರಾಗಿ ಸೇವೆಸಲ್ಲಿಸುತ್ತಿರುವ *ಸುನೀಲ್ ರವರನ್ನು* ಸನ್ಮಾನಿಸಲಾಯಿತು.
ಶಾಲಾ ಪ್ರಾಂಶುಪಾಲರಾದ ಡಾ. *ವರ್ಗಿಸ್ ಕೈಪನಡ್ಕ* ಮಾತನಾಡಿ ಶುಭ ಕೋರಿದರು, ವೇದಿಕೆಯ ಯಲ್ಲಿ ಫಾ. ಜೈಸನ್, ಬರ್ಸರ್ ಫಾ. ಜಾರ್ಜ್ ಸ್ಯಾಮುವೆಲ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸನ್ನಿ ಕೆ. ಎಸ್ ಫಾ. ಜೇಮ್ಸ್, ಉಪಪ್ರಾಂಶುಪಾಲರಾದ ಜೋಸ್ ಎಂ. ಜೆ, ಮುಖ್ಯ್ಯೊಪಾಧ್ಯರಾದ ಜಾರ್ಜ್, ಪ್ರಕಾಶ್, HOD ಸುಶೀಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
*ಬೀಳ್ಕೊಡುಗೆ ಕಾರ್ಯಕ್ರಮ*
ಬೆಥನಿ ವಿದ್ಯಸಂಸ್ಥೆಯಲ್ಲಿ ಸಂಚಾಲಕರಾಗಿ ಬರ್ಸರ್ ಆಗಿ ಸೇವೆ ಸಲ್ಲಿಸಿದ್ದ *ಫಾ. ಜೈಸನ್ ಸೈಮನ್* ರವರನ್ನು ಪಿ. ಟಿ. ಎ ವತಿಯಿಂದ ಮತ್ತು ಶಾಲಾ ಆಡಳಿತ ಮಂಡಳಿಯಿಂದ ಗೌರವಿಸಿ ಬೀಳ್ಕೊಡುಗೆ ಮಾಡಲಾಯಿತು ಶಿಕ್ಷಕರ ರಕ್ಷಕ ಸಂಘ ದ ಅಧ್ಯಕ್ಷರು ಸನ್ನಿ ಕೆ. ಎಸ್, ಉಪಾಧ್ಯಕ್ಷ ಸುಧೀರ್ ಕುಮಾರ್, ಜೊತೆ ಕಾರ್ಯದರ್ಶಿ ಶ್ರೀಮತಿ ಸ್ಟೇಫಿ, ಪ್ರೆಸ್ಸಿ, ಪ್ರಿಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಮ್ಯ ಚಂದ್ರನ್ ನಿರೂಪಿಸಿದರು.
إرسال تعليق